Publish Date: Fri, 06 Jan 2023 (15:59 IST)
Updated Date: Fri, 06 Jan 2023 (16:05 IST)
ಚೆನ್ನೈ: ವಾರಿಸು ಬಿಡುಗಡೆ ಹೊಸ್ತಿಲಲ್ಲೇ ದಳಪತಿ ವಿಜಯ್ ವೈಯಕ್ತಿಕ ಬದುಕಿನ ಬಗ್ಗೆ ಸುದ್ದಿಯೊಂದು ಕೇಳಿಬರುತ್ತಿದೆ. ಇದು ನಿಜವೇ ವದಂತಿಯೇ ಎನ್ನುವುದು ಕನ್ ಫರ್ಮ್ ಆಗಿಲ್ಲ.
ದಳಪತಿ ವಿಜಯ್ ಮತ್ತು ಪತ್ನಿ ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇಬ್ಬರೂ ವಿಚ್ಛೇದನದತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಇದು ಫ್ಯಾನ್ಸ್ ಗೆ ತೀವ್ರ ಬೇಸರ ತಂದಿದೆ.
ವಿಜಯ್-ಸಂಗೀತಾರದ್ದು 23 ವರ್ಷಗಳ ದಾಂಪತ್ಯ. ತಮ್ಮ ಅಭಿಮಾನಿಯಾಗಿದ್ದ ಸಂಗೀತಾರನ್ನು ಪ್ರೀತಿಸಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದರು. ಆದರೆ ಈಗ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇಬ್ಬರೂ ಸಾರ್ವಜನಿಕವಾಗಿ ಒಟ್ಟಿಗೆ ಓಡಾಡುತ್ತಿಲ್ಲ ಎನ್ನುವ ಕಾರಣಕ್ಕೆ ಈ ವದಂತಿ ಹಬ್ಬಿದೆ ಎನ್ನಲಾಗಿದೆ.