Select Your Language

Notifications

webdunia
webdunia
webdunia
webdunia

100 ಎಕರೆಯ ಬಾಹುಬಲಿ ಸೆಟ್ ಗತಿ ಏನಾಯ್ತು ಗೊತ್ತಾ?!

100 ಎಕರೆಯ ಬಾಹುಬಲಿ ಸೆಟ್ ಗತಿ ಏನಾಯ್ತು ಗೊತ್ತಾ?!
ಹೈದರಾಬಾದ್ , ಶನಿವಾರ, 4 ನವೆಂಬರ್ 2017 (08:43 IST)
ಹೈದರಾಬಾದ್: ಬಾಹುಬಲಿ ಹೆಸರು ಕೇಳಿದರೇನೇ ಭಾರತೀಯ ಸಿನಿಮಾ ಅಭಿಮಾನಿಗಳಲ್ಲಿ ಮಿಂಚಿನ ಸಂಚಾರವಾದಂತಾಗುತ್ತದೆ. ಈ ಸಿನಿಮಾ ಶೂಟಿಂಗ್ ಆಗಿದ್ದ ರಾಮೋಜಿ ಫಿಲಂ ಸಿಟಿಯ 100 ಎಕರೆಯ ಸಿನಿಮಾ ಸೆಟ್ ಏನಾಯ್ತು ಗೊತ್ತಾ?

 
 ಈ ವಿಶಾಲ ಸಿನಿಮಾ ಸೆಟ್ ನಲ್ಲಿ ಬಾಹುಬಲಿ ಸಿನಿಮಾದ ಎರಡೂ ಭಾಗಗಳೂ ಶೂಟಿಂಗ್ ಆಗಿತ್ತು. ಮಾಹಿಷ್ಮತಿ ಸಾಮ್ರಾಜ್ಯದ ಅದ್ಭುತ ಸೆಟ್ ಗಾಗಿ ಸಿನಿಮಾ ತಂಡ ಸುಮಾರು 60 ಕೋಟಿ ರೂ. ಖರ್ಚು ಮಾಡಿತ್ತು. ಈ ಅದ್ಭುತ ಸೆಟ್ ಇಂದು ಹೇಗಿದೆ ಗೊತ್ತಾ?

ಇದೀಗ ಪ್ರವಾಸೀ ಕೇಂದ್ರವಾಗಿದೆ. ಇದನ್ನು ಪ್ರವಾಸಿಗರಿಗಾಗಿ ತೆರೆಯಲಾಗಿದೆ. ಅದಕ್ಕೆ ಶುಲ್ಕವನ್ನೂ ನಿಗದಿಪಡಿಸಲಾಗಿದೆ. 1250 ರೂ. ಗಳ ಸಾಮಾನ್ಯ ಎಂಟ್ರಿ ಮತ್ತು 2349 ರೂ.ಗಳ ವಿಶೇಷ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಸಾಮಾನ್ಯ ಪ್ರವೇಶ ಶುಲ್ಕ ಕೊಟ್ಟರೆ ಬೆಳಿಗ್ಗೆ 9 ರಿಂದ 11.30 ರವರೆಗೆ ಬಾಹುಬಲಿ ಸೆಟ್ ನ ನೋಡಬಹುದ. ವಿಶೇಷ ಶುಲ್ಕದಲ್ಲಿ 9 ಗಂಟೆಯಿಂದ 2 ಗಂಟೆಯವರೆಗೆ ಸೆಟ್ ವೀಕ್ಷಣೆ ಮಾಡುವ ಅವಕಾಶ ಪ್ರವಾಸಿಗರಿಗೆ ಒದಗಲಿದೆ. ಇದರ ಟಿಕೆಟ್ ಗಳನ್ನು ರಾಮೋಜಿ ಫಿಲಂ ಸಿಟಿಯ ಅಧಿಕೃತ ವೆಬ್ ಸೈಟ್ ನಲ್ಲಿ ಬುಕಿಂಗ್ ಮಾಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾಗೆ ಸ್ಥಾನ