Publish Date: Tue, 03 Nov 2020 (11:28 IST)
Updated Date: Tue, 03 Nov 2020 (11:35 IST)
ಹೈದರಾಬಾದ್ : ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ಬಜೆಟ್ ನಲ್ಲಿ ನಿರ್ಮಿಸಲಾದ ಚಲನಚಿತ್ರಗಳಿಗೆ ರಾಜಕೀಯ ಪಕ್ಷಗಳ ವಿರೋಧ ವ್ಯಕ್ತವಾಗುತ್ತಿದೆ. ಅದೇರೀತಿ ಇದೀಗ ಖ್ಯಾತ ನಿರ್ದೇಶಕ ರಾಜಮೌಳಿಯವರ RRR ಸಿನಿಮಾದ ಬಗ್ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ನಿರ್ದೇಶಕ ರಾಜಮೌಳಿ ನಿರ್ದೇಶನದ ನಟ ಜೂನಿಯರ್ ಎನ್ ಟಿಆರ್ ಮತ್ತು ನಟ ರಾಮ್ ಚರಣ್ ಅವರು ನಟಿಸಿದ RRR ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಆದರೆ ಅದರಲ್ಲಿ ಬಿಡುಗಡೆಯಾದರೆ ನಟ ಜೂನಿಯರ್ ಎನ್ ಟಿಆರ್ ನಿರ್ವಹಿಸಿದ ಪಾತ್ರ ಭೀಮ್ ಟೇಸರ್ ಬಿಜೆಪಿಯನ್ನು ಅಸಮಾಧಾನಗೊಳಿಸಿದೆ ಎನ್ನಲಾಗಿದೆ.
ಇದರಲ್ಲಿ ನಟ ಜೂನಿಯರ್ ಎನ್ ಟಿಆರ್ ಅವರ ಬೀಮ್ ಪಾತ್ರವನ್ನು ಇಸ್ಲಾಮಿಕ್ ಸ್ನೇಹಿತ ಎಂದು ತೋರಿಸಲಾಗಿದ್ದು, ಇದರಿಂದ ಕೋಪಗೊಂಡ ಬಿಜೆಪಿ ಈ ಚಿತ್ರ ಬಿಡುಗಡೆಯಾದರೆ ಚಿತ್ರಮಂದಿರವನ್ನು ಸುಟ್ಟು ಹಾಕುವುದಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.