Publish Date: Tue, 03 Nov 2020 (11:25 IST)
Updated Date: Tue, 03 Nov 2020 (11:27 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿ ತೀರ್ಪು ಇಂದು ಹೊರಬೀಳಲಿದೆ.
ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿರುವ ರಾಗಿಣಿ-ಸಂಜನಾ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇಬ್ಬರೂ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ತೀರ್ಪು ಇಂದು ಪ್ರಕಟವಾಗಲಿದೆ. ಈಗಾಗಲೇ ವಿಚಾರಣೆ ಪೂರ್ತಿಯಾಗಿದ್ದು, ಇಂದು ಮಧ‍್ಯಾಹ್ನದ ವೇಳೆಗೆ ತೀರ್ಪು ಹೊರಬರಲಿದೆ. ಇದರಿಂದಾಗಿ ನಟಿಮಣಿಯರ ಜೈಲು ವಾಸ ಇಂದು ಅಂತ್ಯವಾಗುತ್ತೋ ಅಥವಾ ಮುಂದುವರಿಯುತ್ತದೋ ಎನ್ನುವುದು ತಿಳಿದುಬರಲಿದೆ.