Publish Date: Fri, 06 Sep 2024 (14:26 IST)
Updated Date: Fri, 06 Sep 2024 (14:31 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಈಗಷ್ಟೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು ಇದಕ್ಕೆ ಸಂಬಂಧಿಸಿದ ಒಂದೊಂದೇ ವಿಚಾರಗಳು ಈಗ ಬಯಲಾಗುತ್ತಿದೆ. ರೇಣುಕಾಸ್ವಾಮಿ ಹತ್ಯೆ ಬಳಿಕ ದರ್ಶನ್ ತನ್ನ ಪ್ರೇಯಸಿ ಪವಿತ್ರಾ ಗೌಡಗೆ ಕರೆ ಮಾಡಿ ಹೇಳಿದ್ದೇನು ಎಂಬುದು ಈಗ ಬಯಲಾಗಿದೆ.
ದರ್ಶನ್ ಆಂಡ್ ಗ್ಯಾಂಗ್ ನ ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡು ಡಿಲೀಟ್ ಆದ ಅಂಶಗಳನ್ನು ರಿಟ್ರೀವ್ ಮಾಡಿದೆ. ದರ್ಶನ್ ಆಂಡ್ ಗ್ಯಾಂಗ್ ಕೊಲೆ ಬಳಿಕ ಯಾರಿಗೆಲ್ಲಾ ಕರೆ ಮಾಡಿದ್ದರು ಎಂಬ ಅಂಶಗಳೂ ಈಗ ಬಯಲಾಗಿದೆ. ಇದೀಗ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಭಾಷಣೆ ಏನಿತ್ತು ಎಂಬುದು ಬಯಲಾಗಿದೆ.
ರೇಣುಕಾಸ್ವಾಮಿ ಹತ್ಯೆಯ ಬಳಿಕ ದರ್ಶನ್ ಆಂಡ್ ಗ್ಯಾಂಗ್ ಗೆ ಟೆನ್ಷನ್ ಶುರುವಾಗಿದೆ. ಈ ಕಾರಣಕ್ಕೆ ದರ್ಶನ್ ತನ್ನ ಪ್ರೇಯಸಿ ಪವಿತ್ರಾ ಗೌಡಗೆ ಕರೆ ಮಾಡಿದ್ದಾರೆ. ಟೆನ್ಷನ್ ನಲ್ಲಿದ್ದ ಪವಿತ್ರಾ ಗೌಡಗೆ ಪೊಲೀಸರು ಒಂದು ವೇಳೆ ಮನೆಗೆ ಬಂದು ಏನೇ ವಿಚಾರಣೆ ಮಾಡಿದರೂ ನನಗೆ ಏನೂ ಗೊತ್ತಿಲ್ಲ ಎಂದೇ ಹೇಳು ಎಂದು ದರ್ಶನ್ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇತ್ತ ಗಾಬರಿಗೊಂಡಿದ್ದ ಪವಿತ್ರಾ ತನ್ನ ಆಪ್ತ ಪವನ್ ಮೇಲೂ ಕೂಗಾಡಿದ್ದಳು ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಪ್ರಕರಣ ತಮ್ಮ ಕುತ್ತಿಗೆಗೆ ಬರುತ್ತದೆ ಎಂದಾಗ ಎಲ್ಲಾ ಆರೋಪಿಗಳು ಟೆನ್ಷನ್ ಗೊಳಗಾಗಿದ್ದರು.