Publish Date: Fri, 06 Sep 2024 (12:33 IST)
Updated Date: Fri, 06 Sep 2024 (12:49 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗ ದರ್ಶನ್ ತೂಗುದೀಪ ಕೇಸ್ ಸದ್ದು ಮಾಡುತ್ತಿರುವಾಗಲೇ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಪ್ರಕರಣವೊಂದು ದಾಖಲಾಗಿದೆ. ಏನಿದರ ಹಿನ್ನಲೆ ಇಲ್ಲಿದೆ ಡೀಟೈಲ್ಸ್.
ಶೂಟಿಂಗ್ ವೇಳೆ ಲೈಟ್ ಮ್ಯಾನ್ ಒಬ್ಬರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಮನದ ಕಡಲು ಸಿನಿಮಾ ಶೂಟಿಂಗ್ ವೇಳೆ ದುರ್ಘಟನೆ ಸಂಭವಿಸಿತ್ತು. ಈ ಸಂಬಂಧ ನಿರ್ದೇಶಕ ಯೋಗರಾಜ್ ಭಟ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮನದ ಕಡಲು ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮಾದನಾಯಕನಹಳ್ಳಿ ಸಮೀಪದ ವಿಆರ್ ಎಲ್ ಅರೇನಾ ಬಳಿ ನಡೆಯುತ್ತಿದೆ. ಈ ವೇಳೆ ಲೈಟ್ ಬಾಯ್ ಒಬ್ಬ 30 ಅಡಿ ಎತ್ತರದಿಂದ ಏಣಿಯಿಂದ ಬಿದ್ದು ಗಂಭೀರ ಗಾಯಗೊಂಡು ಪರಿಣಾಮ ಸಾವನ್ನಪ್ಪಿದ್ದ.
ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.