ಬೆಂಗಳೂರು: ಕಮರ್ ಫಿಲ್ಮ್ ಫ್ಯಾಕ್ಟರಿ ಪ್ರಸ್ತುತಪಡಿಸಿದ 69 ನೇ SOBHA ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2024 ಅನ್ನು ಸ್ಟಾರ್ ಮಾ ಮೂವೀಸ್, ವಿಜಯ್ ಸೂಪರ್, ಏಷ್ಯಾನೆಟ್ ಮೂವೀಸ್ ಮತ್ತು ಸ್ಟಾರ್ ಸುವರ್ಣ ಪ್ಲಸ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ.
ತಾರೆಯರು ಒಟ್ಟುಗೂಡುವ ಪ್ರೀತಿಯ ಕ್ಷಣಗಳಲ್ಲಿ, ಪ್ರಣಯರಾಜ ಶ್ರೀನಾಥ್ ಅವರಿಗೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅವರ 57 ವರ್ಷಗಳ ಕೊಡುಗೆಗಾಗಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸುವುದನ್ನು ವೀಕ್ಷಿಸಿ.
ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರರಂಗದ ಯಶೋಗಾತೆಯನ್ನು ಸಾರುವ ಕಮರ್ ಫಿಲ್ಮ್ ಫ್ಯಾಕ್ಟರಿ ಪ್ರಸ್ತುತಪಡಿಸಿದ 69 ನೇ SOBHA ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2024 ಆಚರಣೆಯನ್ನು ಟಿವಿ ಪರದೆಯಲ್ಲಿ ತರಲು ಫಿಲ್ಮ್‌ಫೇರ್ ಸಜ್ಜಾಗಿದೆ. ಈ ಕಾರ್ಯಕ್ರಮವು ಪ್ರಣಯ ರಾಜ ಎಂದೇ ಪ್ರಖ್ಯಾತರಾಗಿರುವ ಶ್ರೀನಾಥ್ ಅವರಿಗೆ ವಿಶೇಷ ಗೌರವ ಸಮರ್ಪಿಸುವುದನ್ನು ಒಳಗೊಂಡಿರುತ್ತದೆ.
ಸೆಪ್ಟೆಂಬರ್ 1 ರಂದು ಏಷ್ಯಾನೆಟ್ ಮೂವೀಸ್‌ನಲ್ಲಿ ಸಂಜೆ 4:30-6:30 ರವರೆಗೆ ಮಲಯಾಳಂ ಪ್ರಸಾರವನ್ನು ವೀಕ್ಷಿಸಬಹುದು. ತಮಿಳು ಪ್ರಸಾರವು ಸೆಪ್ಟೆಂಬರ್ 7 ರಂದು ವಿಜಯ್ ಸೂಪರ್‌ನಲ್ಲಿ ಸಂಜೆ 4-6 ಗಂಟೆಗೆ ಪ್ರಸಾರವಾಗಲಿದೆ. ಸ್ಟಾರ್ ಸುವರ್ಣ ಪ್ಲಸ್‌ನಲ್ಲಿ ಮಧ್ಯಾಹ್ನ 3-5 ಗಂಟೆಗೆ ಕನ್ನಡದಲ್ಲಿ ಪ್ರಸಾರವಾದರೆ, ತೆಲುಗು ಪ್ರಸಾರವು ಸೆಪ್ಟೆಂಬರ್ 8 ರಂದು ಸಂಜೆ 6-8 ಗಂಟೆಗೆ ಸ್ಟಾರ್ ಮಾ ಮೂವೀಸ್‌ನಲ್ಲಿ ಮೂಡಿಬರಲಿದೆ.
ಪುರುಷರ ಲೀಡಿಂಗ್ ರೋಲ್ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ರಕ್ಷಿತ್ ಶೆಟ್ಟಿ ಗಳಿಸಿದ್ದಾರೆ. ಮಹಿಳಾ ಲೀಡಿಂಗ್ ರೋಲ್ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನಟಿ ಸಿರಿ ರವಿಕುಮಾರ್ ತಮ್ಮದಾಗಿಸಿಕೊಂಡಿದ್ದಾರೆ. ಅದೇ ರೀತಿ ತೆಲುಗು ಸಿನಿಮಾದಲ್ಲಿ ನಾನಿ ಮತ್ತು ಕೀರ್ತಿ ಸುರೇಶ್ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಲೀಡಿಂಗ್ ರೋಲ್ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಮಲಯಾಳಂ ಸಿನಿಮಾದಲ್ಲಿ ಪುರುಷ ವಿಭಾಗದ ಲೀಡಿಂಗ್ ರೋಲ್‌ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮಮ್ಮೂಟಿ ಹಾಗೂ ವಿನ್ಸಿ ಆಲೋಷಿಯಸ್ ಮಹಿಳಾ ವಿಭಾಗದ ಲೀಡಿಂಗ್ ರೋಲ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗಳಿಸಿದ್ದಾರೆ.
ಹಾಗೆಯೇ ತಮಿಳು ಸಿನಿಮಾರಂಗದಲ್ಲಿ ವಿಕ್ರಮ್ ಮತ್ತು ನಿಮಿಷಾ ಸಜಯನ್ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಲೀಡಿಂಗ್ ರೋಲ್ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಎಲ್ಲ ತಾರೆಯರು ಕಳೆದ ವರ್ಷದಲ್ಲಿನ ತಮ್ಮ ಅತ್ಯುತ್ತಮ ಸಾಧನೆಗಳಿಗಾಗಿ ಅಸ್ಕರ್ ಬ್ಲ್ಯಾಕ್ ಲೇಡಿ ಪ್ರಶಸ್ತಿಯನ್ನು ಪಡೆದಿದ್ದಾರೆ.