Select Your Language

Notifications

webdunia
webdunia
webdunia
Tuesday, 1 April 2025
webdunia

ಅಶ್ವಿನಿ ಪುನೀತ್ ರಾಜ್ ಕುಮಾರ್ ವಿರುದ್ಧ ಕೀಳು ಅಭಿರುಚಿಯ ಟ್ರೋಲ್: ದೂರು ಕೊಟ್ಟ ಫ್ಯಾನ್ಸ್

Ashwini Puneeth Rajkumar

Krishnaveni K

ಬೆಂಗಳೂರು , ಗುರುವಾರ, 5 ಸೆಪ್ಟಂಬರ್ 2024 (16:27 IST)
Photo Credit: Facebook
ಬೆಂಗಳೂರು: ಅಶ್ವಿನಿ ಪುನೀತ್ ರಾಜ್ ಕುಮಾರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೀಳು ಅಭಿರುಚಿಯ ಟ್ರೋಲ್ ಮಾಡಿದವರ ವಿರುದ್ಧ ಈಗ ದೊಡ್ಮನೆ ಫ್ಯಾನ್ಸ್ ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ.

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಡಾ.ರಾಜ್ ಕುಟುಂಬದ ವಿರುದ್ಧ ಟ್ರೋಲ್ ಮಾಡುವುದು, ಕೀಳು ಕಾಮೆಂಟ್ ಹಾಕುವುದು ಹೆಚ್ಚಾಗಿದೆ. ಅದರಲ್ಲೂ ಒಂದೇ ವ್ಯಕ್ತಿ ಅತ್ಯಂತ ಕೀಳುಮಟ್ಟದಲ್ಲಿ ಅಶ್ವಿನಿ ಪುನೀತ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಲಾಗುತ್ತಿತ್ತು.

ಇದರ ಬಗ್ಗೆ ಈಗ ದೊಡ್ಮನೆ ಅಭಿಮಾನಿಗಳು ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ. ಅದರಲ್ಲೂ ಒಬ್ಬ ಸ್ಟಾರ್ ನಟನ ಅಭಿಮಾನಿಗಳು ಎಂದು ಹೇಳಿಕೊಂಡು ಕೀಳು ಕಾಮೆಂಟ್ ಮಾಡುತ್ತಿದ್ದಾರೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಅಭಿಮಾನಿಗಳು ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿರುವ ಫಿಲಂ ಚೇಂಬರ್ ಅಧ್ಯಕ್ಷ ಸುರೇಶ್ ಈ ಬಗ್ಗೆ ಸೈಬರ್ ಕ್ರೈಂ ಪೊಲೀರಿಗೆ ದೂರು ನೀಡುವುದಾಗಿ ಹೇಳಿದ್ದಾರೆ. ಚಿತ್ರರಂಗ ಒಂದು ಕುಟುಂಬವಿದ್ದಂತೆ. ಈ ರೀತಿ ಘಟನೆಗಳು ಹೆಚ್ಚಾಗುತ್ತಿವೆ. ಇಂತಹ ಕೃತ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಚಾಮುಂಡೇಶ್ವರಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿ, ದರ್ಶನ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಉಮಾಪತಿ ಶ್ರೀನಿವಾಸ್