Webdunia - Bharat's app for daily news and videos

Install App

ವೀಕೆಂಡ್: ಅಚ್ಚರಿಗೊಳಿಸಲಿದೆ ಅನಂತ್ ನಾಗ್ ಪಾತ್ರ!

Webdunia
ಬುಧವಾರ, 22 ಮೇ 2019 (13:44 IST)
ಅನಂತ್ ನಾಗ್ ಎಲ್ಲಿರುತ್ತಾರೋ ಅಲ್ಲಿ ಹೊಸತನವಿರುತ್ತೆ. ಅವರೊಂದು ಚಿತ್ರ ಒಪ್ಪಿಕೊಂಡರೆಂದರೆ ತಾನೇ ತಾನಾಗಿ ಅದಕ್ಕೊಂದು ತೂಕವೂ ಬಂದು ಬಿಡುತ್ತೆ. ಯಾಕೆಂದರೆ ಅವರು ಯಾವ ಚಿತ್ರಗಳನ್ನೂ ಸುಮ್ಮನೇ ಒಪ್ಪಿಕೊಳ್ಳುವವರಲ್ಲ. ಗಟ್ಟಿ ಕಥೆಯಿಲ್ಲದ ಚಿತ್ರಗಳನ್ನು ಅವರು ಒಪ್ಪಿಕೊಳ್ಳುವುದೂ ಇಲ್ಲ. ಈ ವಾರ ಬಿಡುಗಡೆಯಾಗಲಿರೋ ವೀಕೆಂಡ್ ಚಿತ್ರವನ್ನೂ ಕೂಡಾ ಅವರು ಅದೇ ರೀತಿಯಲ್ಲಿ ಅಳೆದೂ ತೂಗಿ ಮೆಚ್ಚಿಕೊಂಡೇ ಒಪ್ಪಿಕೊಂಡಿರೋದು ವಿಶೇಷ.
ಟೆಕ್ಕಿಗಳ ವೀಕೆಂಡ್ ಮೋಜು ಮಸ್ತ್ತಿಯ ಸುತ್ತಾ ಒಂದಿಡೀ ಬದುಕಿನ ಅನಾವರಣದಂತೆ ಈ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ಅನಂತ್ ನಾಗ್ ಅವರದ್ದು ಪ್ರಧಾನವಾದ ಪಾತ್ರ. ಅವರಿಲ್ಲಿ ಟೆಕ್ಕಿ ಮೊಮ್ಮಗನನ್ನು ಸದಾ ಕಣ್ಣಲ್ಲಿ ಕಣ್ಣಿಟ್ಟು ಕಾಯುವ ತಾತನಾಗಿ ನಟಿಸಿದ್ದಾರೆ. ಅನಂತ್ ಅಭಿನಯಿಸಿರೋ ಪಾತ್ರಗಳೆಲ್ಲವೂ ವಿಶೇಷವಾದದ್ದೇ. ಅದೇ ರೀತಿ ಈ ಪಾತ್ರವೂ ವಿಶೇಷವಾಗಿಯೇ ಇದೆಯಂತೆ. ಅದು ಎಲ್ಲ ನೋಡುಗರನ್ನೂ ಅಚ್ಚರಿಗೊಳಿಸಲಿದೆ ಎಂಬುದು ಚಿತ್ರತಂಡದ ಭರವಸೆ.
ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿರೋ ಈ ಚಿತ್ರವನ್ನು ಡಿ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಶಶಿಧರ್ ಛಾಯಾಗ್ರಹಣ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ, ಮನೋಜ್ ಸಂಗೀತ ಹಾಗೂ ಅನಂತ್ ನಾಗ್, ಮಂಜುನಾಥ್, ನೀನಾಸಂ ರಘು, ಬ್ಯಾಂಕ್ ಸತೀಶ್, ನೀತು ಬಾಲಾ, ವೀಣಾ ಜಯಶಂಕರ್, ಸಂಜಯ್ ನಾಗೇಶ್, ಮಂಜುನಾಥ ಶಾಸ್ತ್ರಿ, ಗೋಪಿನಾಥ್ ಭಟ್, ನಾಗಭೂಷಣ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

ಮುಂದಿನ ಸುದ್ದಿ
Show comments