ಈ ವಾರ ಶುರುವಾಗಲಿದೆ ವೀಕೆಂಡ್ ಮಸ್ತಿ!

Webdunia
ಬುಧವಾರ, 22 ಮೇ 2019 (13:37 IST)
ಸುರೇಶ್ ಶೃಂಗೇರಿ ನಿರ್ದೇಶನದ ವೀಕೆಂಡ್ ಚಿತ್ರ ಹಂತ ಹಂತವಾಗಿ ಟಾಕ್ ಕ್ರಿಯೇಟ್ ಮಾಡುತ್ತಾ ಸಾಗಿ ಬಂದು ಈ ವಾರ ಅದ್ದೂರಿಯಾಗಿ ತೆರೆ ಕಾಣುತ್ತಿದೆ. ಟೆಕ್ಕಿಗಳ ಬದುಕಿನೊಳಗೆ ಇಣುಕು ನೋಟ ಬೀರಿರುವ ಈ ಚಿತ್ರ ಯುವ ತುಮುಲಗಳ ರೋಚಕವಾದ ಕಥಾ ಹಂದರವನ್ನೊಳಗೊಂಡಿದೆ. ಅದರ ಝಲಕ್ಕುಗಳು ಟ್ರೈಲರ್ ಮೂಲಕವೇ ಅನಾವರಣಗೊಂಡು ಪ್ರೇಕ್ಷಕರೆಲ್ಲ ವೀಕೆಂಡಿನತ್ತ ಚಿತ್ತ ನೆಟ್ಟು ಕೂರುವಂತಾಗಿದೆ.
ಮಂಜುನಾಥ್ ಮಯೂರ ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಶೃಂಗೇರಿ ಸುರೇಶ್ ನಿರ್ಮಾಣ ಮಾಡಿದ್ದಾರೆ. ಯುವ ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಟೆಕ್ಕಿಗಳ ಮನೋ ಲೋಕವನ್ನು ಅನಾವರಣಗೊಳಿಸುವಂತೆ ಈ ಚಿತ್ರ ಮೂಡಿ ಬಂದಿದೆಯಂತೆ.


ವೀಕೆಂಡ್ ಅನ್ನೋದು ಹೊರ ಜಗತ್ತಿಗೆ ವಾರಾಂತ್ಯದ ಮೋಜು ಮಸ್ತಿ ಅಂತಷ್ಟೇ ಬಿಂಬಿತವಾಗಿದೆ. ಆದರೆ ಇದರ ಹಿಂದೆ ಅದೆಷ್ಟೋ ದುರಂತಗಾಥೆಗಳೂ ಇವೆ. ಅಂಥಾದ್ದನ್ನೆಲ್ಲ ಒಟ್ಟುಗೂಡಿಸಿ ಸಾಮಾಜಿಕ ಸಂದೇಶವೊಂದನ್ನು ವೀಕೆಂಡ್ ಹೊತ್ತು ತಂದಿದೆ.
ಈ ಮೂಲಕವೇ ಮಿಲಿಂದ್ ಮತ್ತು ಸಂಜನಾ ಬುರ್ಲಿ ಎಂಬ ನಾಯಕ ನಾಯಕಿಯ ಆಗಮನವೂ ಆಗಿದೆ. ಈ ಎರಡೂ ಪಾತ್ರಗಳೂ ಕೂಡಾ ಅನೇಕ ಶೇಡುಗಳನ್ನು ಹೊಂದಿವೆಯಂತೆ. ನಟನೆಗೆ ಸವಾಲಿನಂತಿರೋ ಈ ಪಾತ್ರಗಳನ್ನು ಇವರಿಬ್ಬರೂ ಲೀಲಾಜಾಲವಾಗಿಯೇ ನಿರ್ವಹಿಸಿದ್ದಾರೆಂಬ ಮೆಚ್ಚುಗೆ ಚಿತ್ರತಂಡದಲ್ಲಿದೆ. ಇನ್ನುಳಿದಂತೆ ಅನಂತ್ ನಾಗ್ ಪ್ರಧಾನ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಅದು ವೀಕೆಂಡಿನ ಮತ್ತೊಂದು ಆಕರ್ಷಣೆ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೇವರ ಮಕ್ಕಳಿಗೆ ದೀಪಾವಳಿಗೆ ಸರ್ಪ್ರೈಸ್ ನೀಡಿದ ಸಮಂತಾ ರುತ್ ಪ್ರಭು

ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ: ದೀಪಾವಳಿ ದಿನ ಗುಡ್‌ನ್ಯೂಸ್ ಹಂಚಿಕೊಂಡ ರಶ್ಮಿ ಪ್ರಭಾಕರ್

ಕಾಂತಾರ ಸಕ್ಸನ್‌ ಬೆನ್ನಲ್ಲೇ ಬಿಹಾರದ ಪವರ್‌ಫುಲ್‌ ದೇಗುಲಕ್ಕೆ ಡಿವೈನ್‌ ಸ್ಟಾರ್‌ ರಿಷಭ್‌ ಶೆಟ್ಟಿ ಭೇಟಿ

ಮೊದಲ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಎಂಟ್ರಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ

ಅ.25ರಂದು ಅಪ್ಪು ಫ್ಯಾನ್‌ ಡಮ್‌ ಆ್ಯಪ್‌ ಬಿಡುಗಡೆ: ಕಿಚ್ಚ ಸುದೀಪ್ ಧ್ವನಿಯಲ್ಲಿ ಹೊರಬಿತ್ತು ಟ್ರೇಲರ್

ಮುಂದಿನ ಸುದ್ದಿ
Show comments