Publish Date: Wed, 12 Oct 2022 (16:20 IST)
Updated Date: Wed, 12 Oct 2022 (16:22 IST)
ಹೈದರಾಬಾದ್: ಟಾಲಿವುಡ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸೀಕ್ರೆಟ್ ಮಾಲ್ಡೀವ್ಸ್ ಪ್ರವಾಸ ಮುಗಿಸಿ ತವರಿಗೆ ಮರಳಿದ್ದಾರೆ.
ಮೊನ್ನೆಯಷ್ಟೇ ಕೆಲವೇ ನಿಮಿಷಗಳ ಅಂತರದಲ್ಲಿ ಇಬ್ಬರೂ ವಿಮಾನ ನಿಲ್ದಾಣಕ್ಕೆ ಬಂದು ಮಾಲ್ಡೀವ್ಸ್ ಗೆ ಪ್ರಯಾಣ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು. ಎರಡು ದಿನಗಳ ಕಾಲ ಮಾಲ್ಡೀವ್ಸ್ ಸುಂದರ ತಾಣಗಳಲ್ಲಿ ಕಾಲ ಕಳೆದಿರುವ ಜೋಡಿ ಈಗ ತವರಿಗೆ ವಾಪಸಾಗಿದೆ.
ವಾಪಸಾಗುವಾಗಲೂ ಕ್ಯಾಮರಾ ಕಣ್ಣಿಗೆ ಬೀಳದಂತೆ ಇಬ್ಬರೂ ಪ್ರತ್ಯೇಕವಾಗಿ ಕೆಲವು ನಿಮಿಷಗಳ ಅಂತರದಲ್ಲಿ ಹೊರಗೆ ಬಂದಿದ್ದಾರೆ. ಹೀಗಾಗಿ ಇಬ್ಬರೂ ಒಟ್ಟಾಗಿ ಮಾಲ್ಡೀವ್ಸ್ ಗೆ ತೆರಳಿದ್ದರು ಎಂಬ ರೂಮರ್ ಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ.
-Edited by Rajesh Patil