ಹೈದರಾಬಾದ್: ಟಾಲಿವುಡ್ ಜೋಡಿ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮತ್ತೆ ಲವ್ ಬರ್ಡ್ಸ್ ಗಳಾಗಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದೆ.
ರಶ್ಮಿಕಾ ಮಾಲ್ಡೀವ್ಸ್ ಗೆ ತೆರಳಿದ್ದು, ವಿಜಯ್ ಕೂಡಾ ಅವರ ಜೊತೆಗಿದ್ದಾರೆ ಎನ್ನಲಾಗಿದೆ. ಗೀತಾ ಗೋವಿಂದಂ ಸಿನಿಮಾ ಸಂದರ್ಭದಲ್ಲಿ ಡೇಟಿಂಗ್ ಮಾಡಲು ಆರಂಭಿಸಿದ್ದ ಜೋಡಿ ಎರಡು ವರ್ಷಗಳ ಹಿಂದೆಯೇ ಬ್ರೇಕಪ್ ಮಾಡಿಕೊಂಡಿತ್ತು ಎಂದು ಕೆಲವು ಸುದ್ದಿಗಳಿತ್ತು.
ಆದರೆ ಈಗ ರಶ್ಮಿಕಾ ಗುಡ್ ಬೈ ಸಿನಿಮಾ ಸೋಲಿನ ನಿರಾಸೆಯಲ್ಲಿದ್ದರೆ, ವಿಜಯ್ ಲೈಗರ್ ಸಿನಿಮಾ ಸೋಲಿನ ಹತಾಶೆಯಲ್ಲಿದ್ದಾರೆ. ಇಬ್ಬರೂ ಒಂದೇ ಸಮಯಕ್ಕೆ ಸೋಲಿನ ಬೇಸರದಲ್ಲಿರುವುದೇ ಮತ್ತೆ ಈ ಜೋಡಿ ಒಂದಾಗಲು ಕಾರಣವಾಗಿದೆ ಎಂಬ ಮಾತು ಕೇಳಿಬರುತ್ತಿದೆ.
-Edited by Rajesh Patil