Publish Date: Tue, 11 Oct 2022 (16:16 IST)
Updated Date: Tue, 11 Oct 2022 (16:18 IST)
ಬೆಂಗಳೂರು: ಕಾಂತಾರ ಸಿನಿಮಾ ಸಕ್ಸಸ್ ಆದ ಖುಷಿಯಲ್ಲಿರುವ ರಿಷಬ್ ಶೆಟ್ಟಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಕಾರಣ ಇತ್ತೀಚೆಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ರಿಷಬ್ ಶೆಟ್ಟಿ ಮೋದಿ ಮತ್ತು ರಾಹುಲ್ ಗಾಂಧಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಿ. ಯಾರ ಹೆಸರನ್ನು ಹೇಳಿದರೆ ನಿಮಗೆ ಏನು ಅನಿಸುತ್ತದೆ ಎಂದು ಹೇಳಬೇಕು ಎಂದು ಆಂಕರ್ ಮೋದಿ ಹೆಸರು ಹೇಳಿದಾಗ ರಿಷಬ್ ಶೆಟ್ಟಿ ಉತ್ತಮ ನಾಯಕ ಎಂದಿದ್ದಾರೆ.
ಆದರೆ ರಾಹುಲ್ ಗಾಂಧಿ ಬಗ್ಗೆ ಕೇಳಿದಾಗ ನೋ ಕಾಮೆಂಟ್ಸ್ ಎಂದಿದ್ದರು. ಇದು ಕಾಂಗ್ರೆಸ್ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ರಿಷಬ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.
-Edited by Rajesh Patil