Select Your Language

Notifications

webdunia
webdunia
webdunia
webdunia

ಅನಾರೋಗ್ಯವಾಗಿರುವುದನ್ನು ಕೊನೆಗೂ ಖಚಿತಪಡಿಸಿದ ಸಮಂತಾ

ಅನಾರೋಗ್ಯವಾಗಿರುವುದನ್ನು ಕೊನೆಗೂ ಖಚಿತಪಡಿಸಿದ ಸಮಂತಾ
ಹೈದರಾಬಾದ್ , ಬುಧವಾರ, 12 ಅಕ್ಟೋಬರ್ 2022 (08:10 IST)
WD
ಹೈದರಾಬಾದ್: ನಟಿ ಸಮಂತಾ ಋತು ಪ್ರಭು ಅನಾರೋಗ್ಯಕ್ಕೀಡಾಗಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಲೇ ಇದೆ. ಆದರೆ ನಟಿ ಇದುವರೆಗೆ ಇದರ ಬಗ್ಗೆ ಬಾಯ್ಬಿಟ್ಟಿರಲಿಲ್ಲ.

ಅವರ ಟೀಂ ಇದರ ಬಗ್ಗೆ ಪ್ರತಿಕ್ರಿಯಿಸಿತ್ತು. ಹಾಗಿದ್ದರೂ ಸಮಂತಾಗೆ ಚರ್ಮ ಸಂಬಂಧೀ ಆರೋಗ್ಯ ಸಮಸ್ಯೆಯಿದೆ ಎನ್ನುವುದನ್ನು ನಿರಾಕರಿಸಿತ್ತು.

ಇದೀಗ ಸ್ವತಃ ಸಮಂತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚಿನ ನಾಯಿಯ ಜೊತೆಗಿನ ಫೋಟೋ ಪ್ರಕಟಿಸಿ ‘ಡೌನ್ ನಾಟ್ ಔಟ್’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಾವು ಅನಾರೋಗ್ಯಕ್ಕೀಡಾಗಿರುವುದು ನಿಜ, ಆದರೆ ಕುಗ್ಗಿ ಹೋಗಿಲ್ಲ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿ ವಿರುದ್ಧ ಕಾಂಗ್ರೆಸ್ ಬೆಂಬಲಿಗರ ಸಿಟ್ಟು! ಕಾರಣವೇನು ಗೊತ್ತಾ?