ಚೆನ್ನೈ: ಟಾಲಿವುಡ್ ಸ್ಟಾರ್ ಕಪಲ್ ನಯನತಾರಾ-ವಿಘ‍್ನೇಶ್ ಶಿವನ್ ಜೋಡಿ ಮದುವೆಯಾದ ನಾಲ್ಕೇ ತಿಂಗಳಿಗೆ ಪೋಷಕರಾದ ಖುಷಿ ಹಂಚಿಕೊಂಡಿದ್ದಾರೆ.
ನಯನ್-ವಿಘ್ನೇಶ್ ಅವಳಿ ಮಕ್ಕಳಿಗೆ ಪೋಷಕರಾಗಿರುವ ವಿಚಾರ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಬಾಡಿಗೆ ತಾಯಿ ಮೂಲಕ ನಯನ್-ವಿಘ‍್ನೇಶ್ ಇಬ್ಬರು ಗಂಡು ಮಕ್ಕಳನ್ನು ಪಡೆದಿದ್ದಾರೆ.
ಮಗುವಿನ ಕಾಲಿಗೆ ಮುತ್ತಿಕ್ಕುವ ಫೋಟೋವನ್ನು ವಿಘ‍್ನೇಶ್ ಹಂಚಿಕೊಂಡಿದ್ದಾರೆ. ಜೂನ್ 9 ರಂದು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
-Edited by Rajesh Patil