ಮುಂಬೈ: ಗುಡ್ ಬೈ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದರು. ಆದರೆ ಇದು ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ಗಳಿಕೆ ಮಾಡುವುದರಲ್ಲಿ ವಿಫಲವಾಗಿದೆ.
ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆಗೆ ರಶ್ಮಿಕಾ ಮಗಳ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಟಿಸಿದ್ದರು. ಭಾವನಾತ್ಮಕ ಕತೆಯಿರುವ ಈ ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ 1 ಕೋಟಿ. ಎರಡನೇ ದಿನವೂ ಹೆಚ್ಚು ಕಡಿಮೆ ಅದೇ ಗಳಿಕೆ ಮಾಡಿದೆ.
ಹೀಗಾಗಿ ಟಾಲಿವುಡ್ ನಂತೇ ಬಾಲಿವುಡ್ ನಲ್ಲೂ ಮಿಂಚಬಹುದು ಎಂಬ ರಶ್ಮಿಕಾ ನಿರೀಕ್ಷೆ ಹುಸಿಯಾಗಿದೆ. ಬಾಲಿವುಡ್ ರಶ್ಮಿಕಾಗೆ ಅದೃಷ್ಟ ತಂದುಕೊಟ್ಟಿಲ್ಲ.
-Edited by Rajesh Patil