Publish Date: Wed, 12 Oct 2022 (08:20 IST)
Updated Date: Wed, 12 Oct 2022 (08:54 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ದೊಡ್ಮನೆ ತಯಾರಿ ನಡೆಸಿದೆ.
ಅಕ್ಟೋಬರ್ 28 ರಂದು ಗಂಧದ ಗುಡಿ ಸಾಕ್ಷ್ಯಚಿತ್ರ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಅಂದರೆ ಅಕ್ಟೋಬರ್ 21 ರಂದು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಪ್ರಿ ರಿಲೀಸ್ ಈವೆಂಟ್ ಆಯೋಜಿಸಲು ದೊಡ್ಮನೆ ತಯಾರಿ ನಡೆಸಿದೆ.
ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿವರನ್ನು ಸ್ವತಃ ಅಶ್ವಿನಿ ಪುನೀತ್ ರಾಜ್ ಕುಮಾರ್ ಆಹ್ವಾನಿಸಿದ್ದಾರೆ. ಅಲ್ಲದೆ, ಪರ ಭಾಷಾ ಚಿತ್ರರಂಗದ ದಿಗ್ಗಜರನ್ನೂ ಖುದ್ದಾಗಿ ಅಶ್ವಿನಿ ಆಹ್ವಾನಿಸಲಿದ್ದಾರೆ. ಇನ್ನು ಸ್ಯಾಂಡಲ್ ವುಡ್ ಸ್ನೇಹಿತರನ್ನು ಆಮಂತ್ರಿಸುವ ಜವಾಬ್ಧಾರಿಯನ್ನು ಯುವರಾಜ್ ಕುಮಾರ್ ಹೊತ್ತುಕೊಂಡಿದ್ದಾರೆ.
-Edited by Rajesh Patil
ಅಕ್ಟೋಬರ್ 21 ರಂದು ಪುನೀತ್ ಪರ್ವ ಹೆಸರಿನಲ್ಲಿ ಪ್ರಿ ರಿಲೀಸ್ ಈವೆಂಟ್ ಆಯೋಜನೆಯಾಗಿದ್ದು ಅಶ್ವಿನಿ ಪುನೀತ್ ಅವರೇ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ. ದಕ್ಷಿಣ ಭಾರತದ ಅನೇಕ ಸಿನಿಮಾ ಕಲಾವಿದರು ಅತಿಥಿಗಳಾಗಿ ಬರಲಿದ್ದಾರೆ.