Publish Date: Wed, 12 Oct 2022 (16:04 IST)
Updated Date: Wed, 12 Oct 2022 (16:07 IST)
Photo Courtesy: Focus studio Udupi
ಮಂಗಳೂರು: ಇತ್ತೀಚೆಗೆ ಕಾಂತಾರ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ಕರಾವಳಿಗಳ ಮೆಚ್ಚಿನ ದೈವದ ವೇಷ ಹಾಕಿ ಕುಣಿದಿದ್ದು ಭಾರೀ ಗಮನ ಸೆಳೆದಿತ್ತು. ಇದೀಗ ನಟ ರಮೇಶ್ ಅರವಿಂದ್ ಕರಾವಳಿಗರ ಮೆಚ್ಚಿನ ಯಕ್ಷಗಾನದ ವೇಷ ಹಾಕಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಉಡುಪಿಯ ಫೋಕಸ್ ಸ್ಟುಡಿಯೋ ರಮೇಶ್ ಅರವಿಂದ್ ಗೆ ಯಕ್ಷಗಾನದ ವೇಷ ಹಾಕಿಸಿ ಫೋಟೋ ಶೂಟ್ ಮಾಡಿದೆ. ಸಾಂಪ್ರದಾಯಿಕವಾಗಿ ಬಣ್ಣ ಹಾಕಿ ಕಿರೀಟ ತೊಟ್ಟು ಥೇಟ್ ಯಕ್ಷಗಾನ ಕಲಾವಿದರಂತೇ ರಮೇಶ್ ಕುಣಿತ ಹಾಕಿದ್ದಾರೆ.
ಯಕ್ಷಗಾನದ ವೇಷ ಹಾಕಬೇಕು ಎನ್ನುವುದು ನನ್ನ ಕನಸಾಗಿತ್ತು. ಅದು ಈ ಫೋಟೋ ಶೂಟ್ ಮೂಲಕ ನೆರವೇರಿದೆ. ಈ ಭಾರೀ ತೂಕದ ವೇಷ ಹಾಕಿದ ಸಹಜವಾಗಿಯೇ ನಮ್ಮಲ್ಲಿ ಪರ್ಫಾರ್ಮ್ ಮಾಡುವ ಆವೇಶ ಬರುತ್ತದೆ. ಅದಕ್ಕೆ ಎಲ್ಲಾ ಯಕ್ಷಗಾನ ಕಲಾವಿದರಿಗೆ ನನ್ನದೊಂದು ನಮನ ಎಂದು ರಮೇಶ್ ಹೇಳಿದ್ದಾರೆ.
-Edited by Rajesh Patil