Publish Date: Wed, 12 Oct 2022 (10:20 IST)
Updated Date: Wed, 12 Oct 2022 (10:28 IST)
ಬೆಂಗಳೂರು: ಕಾಂತಾರ ಸಿನಿಮಾ ಸಕ್ಸಸ್ ಕಾಣುತ್ತಿದ್ದಂತೇ ಇನ್ನೊಂದು ಕಡೆ ಅಪಪ್ರಚಾರಗಳೂ ಜೋರಾಗಿವೆ. ಇದರ ಹಿಂದೆ ಬೇರೆಯದೇ ಸಂಚು ಇದೆಯಾ? ಹೀಗೊಂದು ಅನುಮಾನ ಮೂಡುತ್ತಿದೆ.
ಕಾಂತಾರ ಸಿನಿಮಾದ ವರಾಹ ರೂಪಂ ಹಾಡು, ಸಿಂಗಾರ ಸಿರಿಯೇ ಹಾಡಿನ ಟ್ಯೂನ್ ಬೇರೆ ಹಾಡಿನಿಂದ ಕದ್ದು ಬಳಸಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆರೋಪ ಕೇಳಿಬಂದಿದೆ. ಆದರೆ ಬಿಡುಗಡೆಯಾಗಿ ಸಿನಿಮಾ ಇಷ್ಟು ಸಕ್ಸಸ್ ಪಡೆಯುತ್ತಿದೆ ಎಂದ ಮೇಲೆ ಇಂತಹ ಆರೋಪಗಳೆಲ್ಲಾ ಬರುತ್ತಿವೆ.
ಇತ್ತೀಚೆಗೆ ರಿಷಬ್ ಶೆಟ್ಟಿ ಹೇಳಿಕೆ ಬಲಪಂಥೀಯರು, ಎಡಪಂಥೀಯರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕೆಸರೆರಚಾಟಗಳು ನಡೆದಿದ್ದವು. ಇದಲ್ಲದೆ, ಕಾಂತಾರ ಸಿನಿಮಾ ಸಕ್ಸಸ್ ಪರಭಾಷೆಯವರೂ ಹುಬ್ಬೇರುವಂತೆ ಮಾಡಿತ್ತು. ಹೀಗಾಗಿ ಇದೆಲ್ಲಾ ಕಾರಣ ಬೇಕೆಂದೇ ಚಿತ್ರದ ಹಾಡುಗಳನ್ನಿಟ್ಟುಕೊಂಡು ವಿವಾದ ಸೃಷ್ಟಿಸಿ ಚಿತ್ರತಂಡವನ್ನು ಕುಗ್ಗಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
-Edited by Rajesh Patil