ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಲೋಹಿತಾಶ್ವ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಮೊನ್ನೆಯಷ್ಟೇ ಹೃದಯಾಘಾತಕ್ಕೊಳಗಾಗಿದ್ದ ಲೋಹಿತಾಶ್ವ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರಿಗೆ ಪ್ರಜ್ಞೆ ಮರುಕಳಿಸಿದ್ದು, ವೆಂಟಿಲೇಟರ್ ರಿಮೂವ್ ಮಾಡಲಾಗಿದೆ. ಈಗ ಅವರು ಸಹಜವಾಗಿ ಉಸಿರಾಡುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅಕ್ಟೋಬರ್ 4 ರಂದು ಹೃದಯಾಘಾತದಿಂದಾಗಿ ಹಿರಿಯ ನಟನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಶೀಘ್ರ ಗುಣಮುಖರಾಗಲೆಂದು ಅಭಿಮಾನಿಗಳು, ಕುಟುಂಬಸ್ಥರು ಪ್ರಾರ್ಥಿಸಿದ್ದರು.
-Edited by Rajesh Patil