Publish Date: Fri, 14 Oct 2022 (09:30 IST)
Updated Date: Fri, 14 Oct 2022 (09:39 IST)
ಮುಂಬೈ: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ದೈವದ ಕುರಿತಾದ ಕತೆ ಎಂಬ ಕಾರಣಕ್ಕೆ ಎಲ್ಲರೂ ಭಕ್ತಿ ಭಾವದಿಂದ ವೀಕ್ಷಿಸುತ್ತಿದ್ದಾರೆ.
ಇದೀಗ ಸಿನಿಮಾ ಹಿಂದಿಯಲ್ಲೂ ಬಿಡುಗಡೆಯಾಗುತ್ತಿದೆ. ನಾಳೆಯಿಂದ ಹಿಂದಿಯಲ್ಲಿ ಡಬ್ ಆಗಿ ಕಾಂತಾರ ಬಿಡುಗಡೆಯಾಗುತ್ತಿದೆ. ಇದಕ್ಕಾಗಿ ರಿಷಬ್ ಶೆಟ್ಟಿ ಮುಂಬೈನಲ್ಲಿ ಪ್ರಚಾರ ನಡೆಸಿದ್ದಾರೆ.
ಹಿಂದಿ ಮಾಧ್ಯಮವೊಂದರ ಸಂದರ್ಶಕರೊಬ್ಬರು ರಿಷಬ್ ಶೆಟ್ಟಿಯವರನ್ನು ಸಂದರ್ಶನ ಮಾಡುತ್ತಿದ್ದರು. ಸಂದರ್ಶನ ಮಾಡುತ್ತಾ ತಾನೂ ನಿಂತು ರಿಷಬ್ ಗೂ ಎದ್ದು ನಿಲ್ಲಲು ಹೇಳಿದ ಸಂದರ್ಶಕ ನೇರವಾಗಿ ರಿಷಬ್ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಗಲಿಬಿಲಿಗೊಂಡ ರಿಷಬ್ ಹೀಗೆಲ್ಲಾ ಮಾಡಬೇಡಿ ಎಂದಾಗ ಸಂದರ್ಶಕ ನಾನು ಇದುವರೆಗೆ ಈ ರೀತಿ ಮಾಡಿರಲಿಲ್ಲ. ಆದರೆ ಈ ಸಿನಿಮಾ ನೋಡಿದ ಮೇಲೆ ನನಗೆ ನಿಮಗೆ ನಮಸ್ಕರಿಸಬೇಕೆನಿಸಿತು. ಅಂತಹ ಅದ್ಭುತ ಸಿನಿಮಾವಿದು ಎನ್ನುತ್ತಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
-Edited by Rajesh Patil