ಬೆಂಗಳೂರು: ಡಾಲಿ ಧನಂಜಯ್ ಡಾನ್ ಜಯರಾಜ್ ಆಗಿ ಪಾತ್ರ ಮಾಡಿರುವ ಹೆಡ್ ಬುಷ್ ಸಿನಿಮಾದ ಟ್ರೈಲರ್ ಲಾಂಚ್ ಗೆ ಮುಹೂರ್ತ ಫಿಕ್ಸ್ ಆಗಿದೆ.
ಅಕ್ಟೋಬರ್ 16 ರಂದು ಬೆಳಿಗ್ಗೆ 11.07 ಕ್ಕೆ ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ. ಅಕ್ಟೋಬರ್ 21 ಕ್ಕೆ ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗುತ್ತಿದೆ.
ಈ ಸಿನಿಮಾವನ್ನು ಸ್ವತಃ ಡಾಲಿ ಧನಣಜಯ್ ನಿರ್ಮಿಸುತ್ತಿದ್ದು, ಅಗ್ನಿ ಶ್ರೀಧರ್ ನಿರ್ದೇಶಿಸಿದ್ದಾರೆ. ಈಗಾಗಲೇ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿ ಡಾಲಿ ಧನಂಜಯ್ ಹಾಗೂ ತಂಡ ಚಿತ್ರದ ಪ್ರಚಾರವನ್ನೂ ಭರ್ಜರಿಯಾಗಿ ಆರಂಭಿಸಿದೆ.
-Edited by Rajesh Patil