ಬೆಂಗಳೂರು: ಬಿಗ್ ಬಾಸ್ ಕನ್ನಡ 9 ನೇ ಸೀಸನ್ ನಲ್ಲಿ ಸ್ಪರ್ಧಿಗಳು ಬಿಡುವಿನ ಸಮಯದಲ್ಲಿ ಜಾಲಿಯಾಗಿ ಕೂತು ತಮ್ಮ ಖಾಸಗಿ ಬದುಕಿನ ಬಗ್ಗೆ ಹೇಳಿಕೊಳ್ಳುತ್ತಾರೆ.
ಇದೇ ರೀತಿ ಇಂದು ನೇಹಾ ಗೌಡ, ಅನುಪಮಾ ಗೌಡ, ರಾಕೇಶ್, ಅಮೂಲ್ಯ ಗೌಡ, ಪ್ರಶಾಂತ್ ಸಂಬರಗಿ ಸೇರಿದಂತೆ ಮನೆಯ ಸದಸ್ಯರು ಒಟ್ಟಾಗಿ ತಮ್ಮ ವೈಯಕ್ತಿಕ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದರು.
ಎಲ್ಲರಿಗೂ ಗೊತ್ತಿರುವ ಹಾಗೆ ನೇಹಾ ಗೌಡ ಮತ್ತು ಅನುಪಮಾ ಗೌಡ ಮೊದಲಿನಿಂದಲೂ ಅತ್ಯುತ್ತಮ ಸ್ನೇಹಿತರು. ಈ ಹಿಂದೆ ಗೋವಾಗೆ ಟ್ರಿಪ್ ಹೋಗಿದ್ದಾಗ ತಾವು ಕಳೆದಿದ್ದ ಖುಷಿಯ ಕ್ಷಣಗಳನ್ನು ಇಬ್ಬರೂ ಬಿಗ್ ಬಾಸ್ ಮನೆಯ ಸದಸ್ಯರ ಜೊತೆ ಹಂಚಿಕೊಂಡಿದ್ದಾರೆ. 10 ವರ್ಷಗಳ ಬಳಿಕ ನಾವೇ ಫ್ರೆಂಡ್ಸ್ ಗೋವಾಗೆ ಟ್ರಿಪ್ ಹೋಗಿದ್ವಿ ಎಂದು ಅನುಪಮಾ ಮಾತು ಆರಂಭಿಸುತ್ತಾರೆ. ಆಗ ನೇಹಾ ಅದಂತೂ ಮರೆಯಕ್ಕಾಗಲ್ಲ. ನಮ್ಮದೇ ಒಂದು ಲೋಕ ಆಗಿತ್ತು. ಮೂರು ದಿನ ಅಲ್ಲಿ ಕಾಲ ಕಳೆದ್ವಿ. ಅದರಲ್ಲಿ ಫಸ್ಟ್ ನೈಟ್ ನಿದ್ದೆನೇ ಮಾಡಿರಲಿಲ್ಲ. ಎರಡನೇ ದಿನ ಕ್ರೇಜಿಯಾಗಿತ್ತು. ಅಲ್ಲಿದ್ದಷ್ಟೂ ದಿನ ಒಂಥರಾ ಮಾತಾಡ್ಕೊಂಡು ನಮ್ಮದೇ ಟೈಂ ಕಳೆದೆವು ಎಂದು ನೇಹಾ ಹೇಳಿಕೊಂಡಿದ್ದಾರೆ.
-Edited by Rajesh Patil