Select Your Language

Notifications

webdunia
webdunia
webdunia
Tuesday, 8 April 2025
webdunia

ಅಭಿಮಾನಿಗಳ ವಿಡಿಯೋದಿಂದ ಬೇಸರಗೊಂಡ ಕನ್ನಡತಿ ರಂಜಿನಿ ರಾಘವನ್

ರಂಜಿನಿ ರಾಘವನ್
ಬೆಂಗಳೂರು , ಮಂಗಳವಾರ, 11 ಅಕ್ಟೋಬರ್ 2022 (09:50 IST)
WD
ಬೆಂಗಳೂರು: ಕನ್ನಡತಿ ಧಾರವಾಹಿ ಮೂಲಕ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ರಂಜಿನಿ ರಾಘವನ್ ಈಗ ಬೇಸರಗೊಂಡಿದ್ದಾರೆ. ಇದಕ್ಕೆ ಕಾರಣ ಎಡಿಟ್ ಮಾಡಲಾದ ಒಂದು ವಿಡಿಯೋ.

ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಂಜಿನಿ ಜನ ಮೆಚ್ಚಿದ ನಾಯಕಿ ಪ್ರಶಸ್ತಿ ಗೆದ್ದಿದ್ದರು. ನಿರ್ದೇಶಕ, ನಟ ರಿಷಬ್ ಶೆಟ್ಟಿ ಕೈಯಿಂದ ರಂಜಿನಿ ಅವಾರ್ಡ್ ಪಡೆದುಕೊಂಡಿದ್ದರು.

ಆದರೆ ಯಾರೋ ಅಭಿಮಾನಿಗಳು ರಂಜಿನಿ ಪ್ರಶಸ್ತಿ ಪಡೆದ ಬಳಿಕ ಮಾಡಿದ ಭಾಷಣದ ವಿಡಿಯೋವನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಈ ವಿಡಿಯೋದಲ್ಲಿ ರಂಜಿನಿ ತಮಗೆ ಪ್ರಶಸ್ತಿ ನೀಡಿದ ರಿಷಬ್ ಶೆಟ್ಟಿ ಒಂದೇ ಒಂದು ಥ್ಯಾಂಕ್ಸ್ ಕೂಡಾ ಹೇಳಿದ ತುಣುಕು ಇರಲಿಲ್ಲ. ಇದನ್ನೇ ಕೆಲವರು ಪ್ರಶ್ನೆ ಮಾಡಿದ್ದು, ನೀವು ರಿಷಬ್ ಶೆಟ್ಟಿ ಸರ್ ಗೆ ಯಾಕೆ ಥ್ಯಾಂಕ್ಸ್ ಹೇಳಿಲ್ಲ ಎಂದಿದ್ದಾರೆ.

ಇದು ರಂಜಿನಿ ಬೇಸರಕ್ಕೆ ಕಾರಣವಾಗಿದೆ. ಎಡಿಟ್ ಮಾಡಿದ ವಿಡಿಯೋದಿಂದ ನಾನು ಮಾತು ಕೇಳುವ ಹಾಗೆ ಆಗಿದೆ. ಅಸಲಿಗೆ ನಾನು ಆ ವೇಳೆ ರಿಷಬ್ ಶೆಟ್ಟಿ ಅವರಿಗಾಗಿ ಸಿಂಗಾರ ಸಿರಿಯೇ ಹಾಡನ್ನು ಕೂಡಾ ಹಾಡಿದ್ದೆ ಎಂದು ರಂಜಿನಿ ಬೇಸರಿಸಿಕೊಂಡಿದ್ದಾರೆ.


-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ನಯನತಾರಾ-ವಿಘ್ನೇಶ್ ಗೆ ಕಾನೂನು ಸಂಕಷ್ಟ