ಬೆಂಗಳೂರು: ಆಕಾಶ ದೀಪ ಧಾರವಾಹಿ ಖ್ಯಾತಿಯ ನಟಿ ದಿವ್ಯಾ ಶ್ರೀಧರ್ ಮತ್ತು ತಮಿಳು ಕಿರುತೆರೆ ನಟ ಅಮ್ಜದ್ ಖಾನ್ ದಾಂಪತ್ಯ ಜೀವನ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಪತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ತಾನು ಗರ್ಭಿಣಿ ಎಂದು ತಿಳಿದಿದ್ದರೂ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದು ದಿವ್ಯಾ ಆರೋಪಿಸಿದ್ದರು. ಹಲ್ಲೆಗೊಳಗಾದ ಬಳಿಕ ದಿವ್ಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಇದೀಗ ಪತ್ನಿ ದಿವ್ಯಾ ಮಾಡಿರುವ ಆರೋಪಗಳಿಗೆ ಪ್ರತ್ಯುತ್ತರ ನೀಡಿರುವ ಅಮ್ಜದ್ ಖಾನ್ ಹಲ್ಲೆ ನಡೆದಿದ್ದರೆ ನಮ್ಮ ಮನೆಯ ಸಿಸಿಟಿವಿ ಚೆಕ್ ಮಾಡಬಹುದು. ಕೆಟ್ಟ ಸ್ನೇಹಿತರ ಮಾತು ಕೇಳಿ ದಿವ್ಯಾ ಹೀಗೆ ಆಡುತ್ತಿದ್ದಾಳೆ. ಇದೆಲ್ಲಾ ಅಬಾರ್ಷನ್ ಮಾಡಿಕೊಳ್ಳಲು ಮಾಡುತ್ತಿರುವ ನಾಟಕ ಎನಿಸುತ್ತಿದೆ. ಏನೇ ಆದರೂ ನನಗೆ ಮಗು ಬೇಕು. ಇದಕ್ಕಾಗಿ ಪೊಲೀಸ್ ಕಮಿಷನರ್ ಗೆ ದೂರು ನೀಡಲು ಸಿದ್ಧ ಎಂದಿದ್ದಾರೆ.
-Edited by Rajesh Patil