Select Your Language

Notifications

webdunia
webdunia
webdunia
webdunia

ಬಿಬಿಕೆ9: ಅರುಣ್ ಸಾಗರ್, ನವಾಜ್ ಗೆ ಎಚ್ಚರಿಕೆ ನೀಡಿದ ಕಿಚ್ಚ ಸುದೀಪ್

ಬಿಬಿಕೆ9: ಅರುಣ್ ಸಾಗರ್, ನವಾಜ್ ಗೆ ಎಚ್ಚರಿಕೆ ನೀಡಿದ ಕಿಚ್ಚ ಸುದೀಪ್
ಬೆಂಗಳೂರು , ಭಾನುವಾರ, 2 ಅಕ್ಟೋಬರ್ 2022 (09:30 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 9 ರಲ್ಲಿ ನಿನ್ನೆ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾದ ಅರುಣ್ ಸಾಗರ್ ಮತ್ತು ನವಾಜ್ ಗೆ ಕಿಚ್ಚ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅರುಣ್ ಸಾಗರ್ ಈ ವಾರ ಪಿರಮಿಡ್ ಟಾಸ್ಕ್ ಸಂದರ್ಭದಲ್ಲಿ ಟಾಸ್ಕ್ ಅರ್ಧಕ್ಕೇ ಬಿಟ್ಟು ಜೋಕ್ ಮಾಡುತ್ತಾ ನಿಂತಿದ್ದರು. ಈ ವಿಚಾರ ಮನೆಯ ಇತರ ಸದಸ್ಯರಿಗೂ ಇಷ್ಟವಾಗಿರಲಿಲ್ಲ. ಇದೇ ಕಾರಣಕ್ಕೆ ಸುದೀಪ್ ನಾಯಕರಾಗುವಲ್ಲಿ ಜೋಕರ್ ಆಗಬೇಡಿ. ಬಿಗ್ ಬಾಸ್ ನೀಡುವ ಯಾವುದೇ ಟಾಸ್ಕ್ ಹಿಂದೆ ಅಷ್ಟು ಪರಿಶ್ರಮವಿರುತ್ತದೆ. ಇದನ್ನು ಜೋಕ್ ಆಗಿ ತೆಗೆದುಕೊಳ್ಳಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಸ್ಪಷ್ಟನೆ ನೀಡಿರುವ ಅರುಣ್ ಸಾಗರ್ ನವಾಜ್ ಸಿಟ್ಟಿನಲ್ಲಿ ಯಾರಿಗಾದರೂ ಏನಾದರೂ ಮಾಡ್ತಾರೆ ಎನ್ನುವ ಪರಿಸ್ಥಿತಿ ಇತ್ತು. ಹೀಗಾಗಿ ಅವರ ಮನಸ್ಸು ಬೇರೆಡೆಗೆ ತಿರುಗಿಸಲು ಈ ರೀತಿ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಸುದೀಪ್ ನವಾಜ್ ಜವಾಬ್ಧಾರಿ ನಿಮ್ಮದಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ಅಲ್ಲದೆ, ನವಾಜ್ ಗೂ ಎಚ್ಚರಿಕೆ ನೀಡಿರುವ ಸುದೀಪ್, ಇಲ್ಲಿ ಯಾರಿಗೋ ಹೊಡೀತೀನಿ, ಚುಚ್ತೀನಿ ಎಂದೆಲ್ಲಾ ಹೇಳಬೇಡಿ. ಹಾಗೆ ಮಾಡಿದರೂ ಕೇವಲ ಮನೆಯಿಂದ ಹೊರ ಹಾಕ್ತಾರೆ ಅಷ್ಟೇ ಎಂದು ತಿಳಿದುಕೊಳ್ಳಬೇಡಿ. ಹೊರಗೆ ಬಂದ ಮೇಲೂ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ನವಾಜ್ ಕೂಡಾ ಒಪ್ಪಿಕೊಂಡಿದ್ದು, ನಾನು ತಿದ್ದಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

100 ಕೋಟಿ ಕ್ಲಬ್ ಸೇರುತ್ತಾ ಕಾಂತಾರ?