Select Your Language

Notifications

webdunia
webdunia
webdunia
webdunia

100 ಕೋಟಿ ಕ್ಲಬ್ ಸೇರುತ್ತಾ ಕಾಂತಾರ?

100 ಕೋಟಿ ಕ್ಲಬ್ ಸೇರುತ್ತಾ ಕಾಂತಾರ?
ಬೆಂಗಳೂರು , ಭಾನುವಾರ, 2 ಅಕ್ಟೋಬರ್ 2022 (08:40 IST)
WD
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನದಿಂದಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಮೊದಲ ದಿನದ ಪ್ರತಿಕ್ರಿಯೆ ನೋಡಿದ ಬಳಿಕ ಹಲವು ಕಡೆ ಹೆಚ್ಚುವರಿಯಾಗಿ ಶೋ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಜನ ಸಿನಿಮಾ ನೋಡಲು ಅಷ್ಟೊಂದು ಆಸಕ್ತಿ ತೋರುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.

ಮೊದಲ ದಿನ ಕರ್ನಾಟಕದಲ್ಲಿ ಚಿತ್ರದ ಗಳಿಕೆ 3.5 ಕೋಟಿ ರೂ. ದಾಟಿತ್ತು ಎನ್ನಲಾಗಿದೆ. ಇದೀಗ ದಸರಾ ಹಬ್ಬದ ಪ್ರಯುಕ್ತ ವೀಕೆಂಡ್ ರಜಾ ಇದ್ದು, ಇನ್ನಷ್ಟು ಹೆಚ್ಚು ಜನ ಥಿಯೇಟರ್ ಗೆ ಬರುವ ನಿರೀಕ್ಷೆಯಿದೆ. ಹೀಗಾಗಿ ಚಿತ್ರದ ಗಳಿಕೆ ಇನ್ನಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಯಿದೆ. ಈಗ ಸಿಗುತ್ತಿರುವ ಪ್ರತಿಕ್ರಿಯೆ ನೋಡಿದರೆ ಮತ್ತೊಂದು ಕನ್ನಡ ಚಿತ್ರ 100 ಕೋಟಿ ಕ್ಲಬ್ ನತ್ತ ದಾಪುಗಾಲಿಡುವ ಎಲ್ಲಾ ಸಾಧ‍್ಯತೆಗಳಿವೆ.
-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಕೆ9: ಮೊದಲ ವಾರವೇ ಹೊರಬಿದ್ದ ಐಶ್ವರ್ಯಾ ಪಿಸ್ಸೆ