ಬೆಂಗಳೂರು:ಹಲ್ಲೆ, ಬೆದರಿಕೆ ಆರೋಪಕ್ಕೊಳಗಾಗಿರುವ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಬೆಂಬಲಕ್ಕೆ ಇದೀಗ ಉಪೇಂದ್ರ ಬಳಿಕ ನೆನಪಿರಲಿ ಪ್ರೇಮ್ ಬಂದಿದ್ದಾರೆ.
ಉಪೇಂದ್ರ ಇಂದು ಸ್ನೇಹಿತ್ ಒಳ್ಳೆಯ ಹುಡುಗ. ಸಮಸ್ಯೆಗಳೇನೇ ಇದ್ದರೂ ಮಾತನಾಡಿ ಪರಿಹರಿಸಿಕೊಳ್ಳಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದರು.
ಇದೀಗ ನೆನಪಿರಲಿ ಪ್ರೇಮ್ ನಾನು ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬಕ್ಕೆ ಬೆಂಬಲ ನೀಡುತ್ತೇನೆ ಎಂದಿದ್ದಾರೆ. ಸ್ನೇಹಿತ್ ವಿರುದ್ಧ ಹರಿದಾಡುತ್ತಿರುವ ಆರೋಪಗಳಿಗೆ ಯಾವುದೇ ಸಾಕ್ಷ್ಯಗಳಿಲ್ಲ. ಬೆಳೆಯುವ ಹುಡುಗನ ಮೇಲೆ ನಿಮ್ಮ ಪ್ರೀತಿಯಿರಲಿ ಎಂದು ಕೇಳಿಕೊಂಡಿದ್ದಾರೆ.
-Edited by Rajesh Patil