Select Your Language

Notifications

webdunia
webdunia
webdunia
webdunia

‘ಕಿರಿಕ್ ಪಾರ್ಟಿ’ಯವರು ನನ್ನ ಹಿಂದೆ ಬಿದ್ದಿದ್ರು

The 'Kirik Party' fell behind me
bangalore , ಶನಿವಾರ, 1 ಅಕ್ಟೋಬರ್ 2022 (20:04 IST)
ನಟಿ ರಶ್ಮಿಕಾ ಮಂದಣ್ಣ ಈಗ ಚತುರ್ಭಾಷಾ ನಟಿಯಾಗಿದ್ದಾರೆ. ಕನ್ನಡದಲ್ಲಿ ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಬಹು ಬ್ಯುಸಿಯಾಗಿದ್ದಾರೆ. ಈ ನಟಿ ಶೀಘ್ರದಲ್ಲಿಯೇ ಮಲಯಾಳಂಗೂ ಕಾಲಿಡಲಿದ್ದಾರೆ. ಇದೀಗ ಜನಪ್ರಿಯ ಹಿಂದಿ ಯೂಟ್ಯೂಬ್ ಚಾನೆಲ್‌ ಆಗಿರುವ ಮಾಷೆಬಲ್ ಇಂಡಿಯಾಗಾಗಿ ರಶ್ಮಿಕಾ ಮಂದಣ್ಣ ಸಂದರ್ಶನ ನೀಡಿದ್ದು, ತಮ್ಮ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಬಗ್ಗೆ ಮಾತನಾಡಿದ್ದಾರೆ. ಕಿರಿಕ್ ಪಾರ್ಟಿ ತಂಡದವರು ನನ್ನನ್ನು ಸಿನಿಮಾಕ್ಕೆ ಹಾಕಿಕೊಳ್ಳಲು ಹಿಂದೆ ಬಿದ್ದಿದ್ದರು, ನಾನೇ ಅವಾಯ್ಡ್ ಮಾಡುತ್ತಿದ್ದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ತೆಲುಗು, ತಮಿಳಿನಲ್ಲಿ ಹಿಟ್ ಆದ ಬಳಿಕ ಇದೀಗ ಬಾಲಿವುಡ್‌ನತ್ತ ಮುಖ ಮಾಡಿರುವ ರಶ್ಮಿಕಾ ಮಂದಣ್ಣ, ಬಾಲಿವುಡ್‌ನಲ್ಲಿಯೇ ನೆಲೆ ನಿಲ್ಲುವ ಯೋಜನೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಖಾಸಗಿ ತರಬೇತುದಾರರನ್ನು ಇರಿಸಿಕೊಂಡು ಹಿಂದಿ ಕಲಿಯುತ್ತಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪು ಮಾಡಬೇಕಿದ್ದ ಸಿನಿಮಾಗೆ ಮಲಯಾಳಂ ನಟ: ಹೊಂಬಾಳೆ ಫಿಲಂಸ್ ವಿರುದ್ಧ ಫ್ಯಾನ್ಸ್ ಕಿಡಿ