ಬೆಂಗಳೂರು: ಬಿಗ್ ಬಾಸ್ ಕನ್ನಡ 9 ನೇ ಆವೃತ್ತಿಯಿಂದ ಮೊದಲನೇ ವಾರವೇ ಹೊರಬಿದ್ದ ಸ್ಪರ್ಧಿ ಐಶ್ವರ್ಯಾ ಪಿಸ್ಸೆ. 
									
			
			 
 			
 
 			
			                     
							
							
			        							
								
																	ನಿನ್ನೆ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕೊನೆಯಲ್ಲಿ ಐಶ್ವರ್ಯಾ ವೀಕ್ಷಕರ ಕಡಿಮೆ ವೋಟ್ ಪಡೆದ ಕಾರಣ ಮೊದಲನೇ ವಾರವೇ ಹೊರಬಿದ್ದಿದ್ದಾರೆ.
									
										
								
																	ಈ ಬಾರಿ ಒಟ್ಟು 12 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಈ ಪೈಕಿ ಅರುಣ್ ಸಾಗರ್ ಮೊದಲನೆಯವರಾಗಿ ಸೇಫ್ ಆಗಿದ್ದಾರೆ. ಉಳಿದಂತೆ ಇದೀಗ ಒಟ್ಟು 17 ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಂಡಿದ್ದಾರೆ.
-Edited by Rajesh Patil