ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಯಾಗಿರುವ ಆರ್ಯವರ್ಧನ್ ಗುರೂಜಿ ಮೇಲೆ ಹಿಂದೆ ಆಗಿದ್ದ ಕೇಸ್ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಈಗ ಬಿಗ್ ಬಾಸ್ ಮೂಲಕ ಒಳ್ಳೆ ಹೆಸರು, ಫ್ಯಾನ್ಸ್ ಫಾಲೋವರ್ಸ್ ಸಂಪಾದನೆ ಮಾಡಿರುವ ಆರ್ಯವರ್ಧನ್ ಗುರೂಜಿ ಮೇಲೆ 2016 ರಲ್ಲಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು ಎಂಬ ಸುದ್ದಿ ಈಗ ಸದ್ದು ಮಾಡುತ್ತಿದೆ.
ಮಹಿಳೆಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯವರ್ಧನ್ ಗುರೂಜಿ ಮೇಲೆ ಈ ಹಿಂದೆ ಎಫ್ ಐಆರ್ ದಾಖಲಾಗಿತ್ತು ಎಂದು ಕೆಲವರು ಹಳೇ ವಿಚಾರ ಕೆದಕಿದ್ದಾರೆ.
-Edited by Rajesh Patil