ಬೆಂಗಳೂರು: ಮಾಸ್ಟರ್ ಆನಂದ್ ಮಗಳು ವಂಶಿಕಾ ಈಗಾಗಲೇ ಕಲರ್ಸ್ ವಾಹಿನಿಯಲ್ಲಿ ರಿಯಾಲಿಟಿ ಶೋ ಮೂಲಕ ಸ್ಟಾರ್ ಆಗಿದ್ದಾಳೆ.
ಇದೀಗ ಪುಟಾಣಿ ವಂಶಿಕಾ ನಿರೂಪಣೆ ಮಾಡಲಿದ್ದಾಳೆ. ಈಗಾಗಲೇ ಅಭಿನಯ, ತುಂಟಾಟದ ಮೂಲಕ ಜನರ ಗಮನ ಸೆಳೆದಿರುವ ವಂಶಿಕಾ ಈಗ ಕಲರ್ಸ್ ಕನ್ನಡ ವಾಹಿನಿಯ ನನ್ನಮ್ಮ ಸೂಪರ್ ಸ್ಟಾರ್ ಎರಡನೇ ಸೀಸನ್ ನ ನಿರೂಪಣೆ ಮಾಡಲಿದ್ದಾಳೆ.
ವಂಶಿಕಾ ಜೊತೆಗೆ ನಿರಂಜನ್ ದೇಶ್ ಪಾಂಡೆ ಕೂಡಾ ನಿರೂಪಕರಾಗಿರಲಿದ್ದಾರೆ. ಆದರೆ ಪುಟಾಣಿ ವಂಶಿಕಾ ಯಾವ ರೀತಿ ಕಾರ್ಯಕ್ರಮ ನಿರೂಪಿಸಬಹುದು ಎಂಬ ಕುತೂಹಲ ಪ್ರೇಕ್ಷಕರಿಗಿದೆ.