Publish Date: Mon, 26 Sep 2022 (09:30 IST)
Updated Date: Mon, 26 Sep 2022 (09:42 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ನಲ್ಲಿ ಮೊದಲ ವಾರವೇ ಸಾಲು ಸಾಲು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.
ಮೊದಲ ವಾರವೇ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವ ಸದಸ್ಯರೆಂದರೆ ಆರ್ಯವರ್ಧನ್, ದರ್ಶ್, ದಿವ್ಯಾ, ಸಾನಿಯಾ, ಮಯೂರಿ, ರೂಪೇಶ್ ಶೆಟ್ಟಿ, ಪ್ರಶಾಂತ್, ಕಾವ್ಯಾ ಶ್ರೀ, ಐಶ್ವರ್ಯಾ, ವಿನೋದ್, ಅರುಣ್ ಸಾಗರ್, ನವಾಜ್.
ಇಂದಿನಿಂದ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಉಳಿಸಿಕೊಳ್ಳಲು ವೀಕ್ಷಕರಿಗೆ ವೋಟಿಂಗ್ ಲೈನ್ ಗಳು ಲಭ್ಯವಿದ್ದು, ಕಡಿಮೆ ವೋಟ್ ಪಡೆದ ಸ್ಪರ್ಧಿ ಈ ವಾರ ಮನೆಯಿಂದ ಹೊರಹೋಗಲಿದ್ದಾರೆ.