Publish Date: Sun, 09 Oct 2022 (09:30 IST)
Updated Date: Sun, 09 Oct 2022 (09:30 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ವೀಕ್ಷಿಸಿದ ಕಿಚ್ಚ ಸುದೀಪ್ ಮೆಚ್ಚುಗೆಯ ಚಪ್ಪಾಳೆ ನೀಡಿದ್ದಾರೆ.
ಕೆಲವು ಸಿನಿಮಾಗಳು ನಮಗೆ ಒಳ್ಳೆಯ ಭಾವನೆ, ಖುಷಿ ನೀಡುತ್ತದೆ. ಆದರೆ ಕೆಲವು ಸಿನಿಮಾ ಮಾತ್ರ ಮಾತೇ ಹೊರಡದಂತೆ ಮಾಡುತ್ತದೆ. ಅಂತಹ ಸಿನಿಮಾಗಳಲ್ಲಿ ಒಂದು ಕಾಂತಾರ. ಒಂದು ಸರಳ ಕತೆಯನ್ನು ರಿಷಬ್ ಅದ್ಭುತವಾಗಿ ಬರೆದು ತೆರೆ ಮೇಲೆ ತಂದಿದ್ದಾರೆ. ಇಂತಹದ್ದೊಂದು ಕಲ್ಪನೆ ಬರುವುದಾದರೂ ಹೇಗೆ ಎಂದು ನಿಜಕ್ಕೂ ನನಗೆ ಅಚ್ಚರಿಯಾಗುತ್ತದೆ. ರಿಷಬ್ ನಟನೆಯಲ್ಲೂ ಅದ್ಭುತ.
ಪೇಪರ್ ನಲ್ಲಿ ಬರೆಯುವಾಗ ಇದು ಸಿಂಪಲ್ ಸ್ಕ್ರಿಪ್ಟ್ ಆಗಿರಬಹುದು. ಆದರೆ ಅದನ್ನು ತೆರೆ ಮೇಲೆ ಇಷ್ಟು ಅದ್ಭುತವಾಗಿ ತರಬೇಕಾದರೆ ಒಬ್ಬ ನಿರ್ದೇಶಕನಿಗೆ ಅತ್ಯದ್ಭುತ ಕಲ್ಪನೆ ಇರಬೇಕು. ಇಡೀ ಚಿತ್ರತಂಡಕ್ಕೆ ನಾನು ಎದ್ದು ನಿಂತು ಚಪ್ಪಾಳೆ ನೀಡುತ್ತೇನೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
-Edited by Rajesh Patil