Publish Date: Fri, 07 Oct 2022 (09:00 IST)
Updated Date: Fri, 07 Oct 2022 (09:25 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ಮತ್ತೆ ಗೆದ್ದಿದೆ. ಕೆಜಿಎಫ್ ಬಳಿಕ ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ಕಾಂತಾರ ಸಿನಿಮಾ ವಾರ ಕಳೆದರೂ ಹೌಸ್ ಫುಲ್ ಆಗಿ ಪ್ರದರ್ಶನ ಮುಂದುವರಿಸಿದೆ. ವಿಶೇಷವೆಂದರೆ ಗಡಿನಾಡಿನಲ್ಲಿ ಸಿನಿಮಾಗೆ ಹೆಚ್ಚಿನ ಬೇಡಿಕೆಯಿದೆ.
ಸಾಮಾನ್ಯವಾಗಿ ಗಡಿ ಭಾಗಗಳಲ್ಲಿ ಒಂದು ವಾರ ಪೂರ್ತಿ ಕನ್ನಡ ಸಿನಿಮಾಗಳು ಹೌಸ್ ಫುಲ್ ಪ್ರದರ್ಶನ ಕಾಣುವುದು ಅಪರೂಪ. ಆ ನಿಟ್ಟಿನಲ್ಲಿಯೂ ಕಾಂತಾರ ಗೆದ್ದಿದೆ. ರಿಷಬ್ ಶೆಟ್ಟಿ ಮತ್ತೆ ಕಾಸರಗೋಡು ಸಿನಿಮಾ ಬಳಿಕ ಕರಾವಳಿ ಕತೆಯ ಮೂಲಕ ಜನರ ಮನ ಗೆದ್ದಿದ್ದಾರೆ.
Edited by Rajesh Patil