Publish Date: Fri, 07 Oct 2022 (08:50 IST)
Updated Date: Fri, 07 Oct 2022 (09:20 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಭರ್ಜರಿ ಹಿಟ್ ಸಿನಿಮಾ ಕಾಂತಾರ ಈಗ ಹಿಂದಿಯಲ್ಲೂ ತೆರೆ ಕಾಣುತ್ತಿದೆ.
ಕನ್ನಡದಲ್ಲಿ ಸಿಕ್ಕ ಭರ್ಜರಿ ಯಶಸ್ಸಿನ ಹಿನ್ನಲೆಯಲ್ಲಿ ಪರ ಭಾಷೆಗಳಲ್ಲೂ ಚಿತ್ರ ಬಿಡುಗಡೆ ಮಾಡಲು ಮನವಿಗಳು ಬಂದಿದ್ದವು.
ಹೀಗಾಗಿ ಕಾಂತಾರ ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲು ಹೊಂಬಾಳೆ ಫಿಲಂಸ್ ತಯಾರಿ ನಡೆಸಿದೆ. ಅಕ್ಟೋಬರ್ 9 ರಂದು ಹಿಂದಿಯಲ್ಲಿ ಟ್ರೈಲರ್ ಲಾಂಚ್ ಆಗುತ್ತಿದೆ.
-Edited by Rajesh Patil