Publish Date: Thu, 06 Oct 2022 (07:30 IST)
Updated Date: Thu, 06 Oct 2022 (07:54 IST)
ಬೆಂಗಳೂರು: ಕಿಚ್ಚ ಸುದೀಪ್ ಇನ್ ಸ್ಟಾಗ್ರಾಂನಲ್ಲಿ ಮೊನ್ನೆಯಷ್ಟೇ ಭರ್ಜರಿ ವರ್ಕೌಟ್ ಮಾಡುತ್ತಿರುವ ಫೋಟೋ ಪ್ರಕಟಿಸಿದ್ದರು. ಇದು ಭಾರೀ ವೈರಲ್ ಆಗಿತ್ತು.
ಅಷ್ಟಕ್ಕೂ ಸುದೀಪ್ ವರ್ಕೌಟ್ ಮಾಡಿರುವುದು ಅವರ ಹೊಸ ಸಿನಿಮಾಗಾಗಿ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿ ಕಿಚ್ಚ ಈಗಾಗಲೇ ಹೇಳಿದ್ದಾರೆ.
ಹೀಗಾಗಿ ಈ ಪ್ರಾಜೆಕ್ಟ್ ಗಾಗಿಯೇ ಕಿಚ್ಚ ತಯಾರಾಗುತ್ತಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಕಿಚ್ಚನ ಹೊಸ ಸಿನಿಮಾ ಘೋಷಣೆಯಾಗುವ ಸಾಧ್ಯತೆಯಿದೆ.
-Edited by Rajesh Patil