Publish Date: Thu, 13 Oct 2022 (16:00 IST)
Updated Date: Thu, 13 Oct 2022 (16:03 IST)
ಚೆನ್ನೈ: ನಟಿ ಶ್ರುತಿ ಹಾಸನ್ ಮೂಗಿಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಕೆಲವು ಸಮಯದ ಹಿಂದೆ ರೂಮರ್ ಕೇಳಿಬಂದಿತ್ತು.
ಇದೀಗ ಸ್ವತಃ ಶ್ರುತಿ ಸರ್ಜರಿ ಮಾಡಿಸಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮೂಗಿಗೆ ಸರ್ಜರಿ ಮಾಡಿಸಿಕೊಂಡಿದ್ದಕ್ಕೆ ಕಾರಣ ಹೇಳಿಕೊಂಡಿದ್ದಾರೆ ಶ್ರುತಿ.
ನನಗೆ ಮೂಗಿನ ಸಮಸ್ಯೆಯಿತ್ತು. ನೋವಾಗುತ್ತಿತ್ತು. ಹೀಗಾಗಿ ಸರ್ಜರಿ ಮಾಡಿಸಿಕೊಂಡೆ. ಅದರ ಬದಲು ಚೆನ್ನಾಗಿ ಕಾಣುವುದಕ್ಕೆ ಸರ್ಜರಿ ಮಾಡಿಸಬೇಕೆಂದು ನನಗೆ ಅನಿಸಿಲ್ಲ ಎಂದಿದ್ದಾರೆ ಶ್ರುತಿ.
-Edited by Rajesh Patil