ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಲಾಲ್ ಸಿಂಗ್ ಛಡ್ಡಾ ಸೋಲಿನಿಂದ ಚೇತರಿಸಿಕೊಳ್ಳುವ ಮೊದಲೇ ಬಾಲಿವುಡ್ ನಟ ಅಮೀರ್ ಖಾನ್ ಮತ್ತೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಜಾಹೀರಾತೊಂದರಲ್ಲಿ ಕಿಯಾರ ಅಡ್ವಾಣಿ ಮತ್ತು ಅಮೀರ್ ನವದಂಪತಿಗಳಾಗಿ ಕಾಣಿಸಿಕೊಂಡಿದ್ದಾರೆ. ಸೇರು ಒದ್ದು ಮದುಮಗಳು ಗಂಡನ ಮನೆ ಪ್ರವೇಶಿಸುವಾಗ ತಡೆಯುವ ಅಮೀರ್ ಮದುವೆ ಪದ್ಧತಿ ಬದಲಾಯಿಸೋಣ ಎಂದು ತಾವೇ ಸೇರು ಒದ್ದು ಒಳಬರುತ್ತಾರೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮೂಲಕ ಅಮೀರ್ ಮತ್ತೆ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಅಮೀರ್ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ.
-Edited by Rajesh Patil