ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಮಾಜಿ ಪ್ರೇಯಸಿ ಊರ್ವಶಿ ರೌಟೇಲಾ ಈಗ ಆಸ್ಟ್ರೇಲಿಯಾಗೆ ತೆರಳಿದ್ದಾರೆ.
ಟಿ20 ವಿಶ್ವಕಪ್ ಗಾಗಿ ರಿಷಬ್ ಪಂತ್ ಕೂಡಾ ಆಸ್ಟ್ರೇಲಿಯಾದಲ್ಲಿದ್ದಾರೆ. ಈಗ ಊರ್ವಶಿ ಕೂಡಾ ಅವರನ್ನು ಹಿಂಬಾಲಿಸಿ ಆಸ್ಟ್ರೇಲಿಯಾಗೆ ತೆರಳಿರುವುದನ್ನು ನೆಟ್ಟಿಗರು ಮೆಮೆ ಮೂಲಕ ಟ್ರೋಲ್ ಮಾಡಿದ್ದಾರೆ.
ಇತ್ತೀಚೆಗೆ ರಿಷಬ್-ಊರ್ವಶಿ ನಡುವಿನ ಸೋಷಿಯಲ್ ಮೀಡಿಯಾ ಕಿತ್ತಾಟ ವೈರಲ್ ಆಗಿತ್ತು. ರಿಷಬ್ ಹೆಸರೆತ್ತದೇ ಊರ್ವಶಿ ಆ ಕ್ರಿಕೆಟಿಗ ನನಗಾಗಿ ಗಂಟೆಗಟ್ಟಲೆ ಹೋಟೆಲ್ ಬಾಲ್ಕನಿಯಲ್ಲಿ ಕಾದು ಕುಳಿತಿದ್ದ ಎಂದಿದ್ದರು. ಇದಕ್ಕೆ ಪಂತ್ ತಿರುಗೇಟು ನೀಡಿದ್ದರು.
ಇಬ್ಬರ ನಡುವಿನ ಕಿತ್ತಾಟವೇನೇ ಇದ್ದರೂ ರಿಷಬ್ ಪಂತ್ ರನ್ನು ಹಿಂಬಾಲಿಸಿ ಊರ್ವಶಿಯೂ ಆಸ್ಟ್ರೇಲಿಯಾ ವಿಮಾನವೇರಿರುವುದನ್ನು ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.
-Edited by Rajesh Patil