ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಗೆ ಇಂದು 80 ನೇ ಜನ್ಮದಿನದ ಸಂಭ್ರಮ. ಈ ಪ್ರಯುಕ್ತ ಅವರ ಪುತ್ರ ಅಭಿಷೇಕ್ ಸರ್ಪೈಸ್ ಒಂದನ್ನು ಕೊಟ್ಟಿದ್ದಾರೆ.
ಅಮಿತಾಭ್ ಬಚ್ಚನ್ ಹಲವು ವರ್ಷಗಳಿಂದ ಕೌನ್ ಬನೇಗಾ ಕರೋಡ್ ಪತಿ ಎಂಬ ಕ್ವಿಜ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇಂದು ಅವರ ಹುಟ್ಟುಹಬ್ಬದ ನಿಮಿತ್ತ ಪುತ್ರ ಅಭಿಷೇಕ್ ಬಚ್ಚನ್ ತಾಯಿ ಜಯಾ ಬಚ್ಚನ್ ಜೊತೆಗೆ ಶೋ ಎಂಟ್ರಿ ಕೊಟ್ಟು ಸ್ವತಃ ಅಮಿತಾಭ್ ಗೆ ಸರ್ಪೈಸ್ ಕೊಡುತ್ತಾರೆ. ಜೊತೆಗೆ ಅಮಿತಾಭ್ ಕುರಿತಾಗಿ ಯಾರಿಗೂ ತಿಳಿಯದ ಅನೇಕ ವಿಚಾರಗಳನ್ನು ಹೊರಹಾಕಲಿದ್ದಾರೆ.
ಭಾರತೀಯ ಚಿತ್ರರಂಗದ ಮೇರು ನಟ ಅಮಿತಾಭ‍್ ಹುಟ್ಟುಹಬ್ಬಕ್ಕೆ ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಸಿನಿಮಾ ಗಣ‍್ಯರು, ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಶುಭ ಹಾರೈಸಿದ್ದಾರೆ.
-Edited by Rajesh Patil