Publish Date: Fri, 14 Oct 2022 (09:00 IST)
Updated Date: Fri, 14 Oct 2022 (09:09 IST)
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾಗೆ ಇಂದು ಬಹುಭಾಷೆಗಳಲ್ಲೂ ಭಾರೀ ಬೇಡಿಕೆ ಬಂದಿದೆ. ಮಲ್ಟಿಪ್ಲೆಕ್ಸ್ ಗಳಲ್ಲೂ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಇದೇ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರ ಏಳು ವರ್ಷಗಳ ಹಳೆಯ ಟ್ವೀಟ್ ಒಂದು ವೈರಲ್ ಆಗಿದೆ. ಕಿರಿಕ್ ಪಾರ್ಟಿ ಸಿನಿಮಾ ಬರುವ ಮೊದಲು ರಿಷಬ್ ಯಾರೆಂದೇ ಜನರಿಗೆ ಅಷ್ಟೊಂದು ಪರಿಚಯವಿರಲಿಲ್ಲ. ತಮ್ಮ ಸಿನಿಮಾ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನ ಏರ್ಪಡಿಸಲು ರಿಷಬ್ ಹೆಣಗಾಡಿದ್ದರು.
ಏಳು ವರ್ಷಗಳ ಹಿಂದೆ ರಿಷಬ್ ಅಂತೂ ತಮ್ಮ ಸಿನಿಮಾಗೆ ಮಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರಮಂದಿರವೊಂದರಲ್ಲಿ ಅವರಿವರ ಕೈ ಕಾಲು ಹಿಡಿದು ಸಂಜೆ 7 ಗಂಟೆಯ ಒಂದು ಶೋ ಸಿಕ್ಕಿದೆ. ದಯಮಾಡಿ ಸಿನಿಮಾ ನೋಡಿ ಎಂದು ಟ್ವೀಟ್ ಮಾಡಿದ್ದರು. ಇಂದು ಆ ಟ್ವೀಟ್ ವೈರಲ್ ಆಗಿದೆ. ಅಂದು ಹಾಗೆ ಟ್ವೀಟ್ ಮಾಡಿದ್ದ ರಿಷಬ್ ಸಿನಿಮಾಗೆ ಇಂದು ಮಲ್ಟಿಪ್ಲೆಕ್ಸ್ ನಲ್ಲಿ ಎಷ್ಟು ಬೇಡಿಕೆಯಿದೆಯೆಂದರೆ ಜನ ಟಿಕೆಟ್ ಸಿಗದೇ ಒದ್ದಾಡುವ ಹಾಗೆ ಆಗಿದೆ. ಇದೇ ಅಲ್ಲವೇ ಸಾಧನೆ ಎಂದರೆ?
-Edited by Rajesh Patil