Publish Date: Sat, 15 Oct 2022 (08:20 IST)
Updated Date: Sat, 15 Oct 2022 (08:53 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಕನ್ನಡ, ಹಿಂದಿಯಲ್ಲಿ ಸಕ್ಸಸ್ ಕಂಡ ಬಳಿಕ ಇಂದು ತೆಲುಗು, ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ.
ಹಿಂದಿಯಲ್ಲಿ ಡಬ್ಬಿಂಗ್ ವರ್ಷನ್ ನಿನ್ನೆ ಬಿಡುಗಡೆಯಾಗಿತ್ತು. ಕನ್ನಡ ಮೂಲ ಸಿನಿಮಾ ಹಿಂದಿಯಲ್ಲಿ ಡಬ್ ಆಗಿ ಬಂದರೂ ಜನ ಅಷ್ಟೇ ಆಸಕ್ತಿಯಿಂದ ಥಿಯೇಟರ್ ಗೆ ಬಂದು ಸಿನಿಮಾ ನೋಡಿದ್ದಾರೆ.
ಇದೀಗ ತೆಲುಗು, ತಮಿಳಿನಲ್ಲೂ ಅದೇ ಯಶಸ್ಸು ಸಿಗುವ ಸಾಧ‍್ಯತೆಯಿದೆ. ಸಾಕಷ್ಟು ಥಿಯೇಟರ್ ಗಳಲ್ಲಿ ಸಿನಿಮಾಗೆ ಭಾರೀ ಬೇಡಿಕೆಯಿದೆ. ಹೀಗಾಗಿ ಕಾಂತಾರವೂ ಪರಭಾಷೆಗಳಲ್ಲಿ ಕೆಜಿಎಫ್ ನಂತೇ ಕನ್ನಡದ ಹೆಸರು ಉತ್ತುಂಗಕ್ಕೆ ಕೊಂಡೊಯ್ಯಲಿದೆ ಎಂಬ ವಿಶ್ವಾಸವಿದೆ.
-Edited by Rajesh Patil