Publish Date: Sat, 15 Oct 2022 (09:30 IST)
Updated Date: Sat, 15 Oct 2022 (09:44 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಹೊಸ ದಾಖಲೆ ಮಾಡಿದೆ.
ಐಎಂಡಿಬಿ ರೇಟಿಂಗ್ ನಲ್ಲಿ ಕಾಂತಾರ ಸಿನಿಮಾ ಗರಿಷ್ಠ ರೇಟಿಂಗ್ ಪಡೆದು ನಂ.1 ಸ್ಥಾನಕ್ಕೇರಿದೆ. ಒಟ್ಟು 10 ಕ್ಕೆ 9.5 ರೇಟಿಂಗ್ ಪಡೆದುಕೊಂಡಿದೆ. 13 ಸಾವಿರಕ್ಕೂ ಅಧಿಕ ಐಎಂಡಿಬಿ ಬಳಕೆದಾರರು ಸಿನಿಮಾವನ್ನು ಮೆಚ್ಚಿ ರೇಟಿಂಗ್ ಕೊಟ್ಟಿದ್ದಾರೆ.
ಇದು ಕನ್ನಡದ ಮಟ್ಟಿಗೆ ಹೊಸ ದಾಖಲೆ. ಈ ಮೊದಲು ಬಿಡುಗಡೆಯಾಗಿ 1000 ಕೋಟಿ ಬಾಚಿದ್ದ ಕೆಜಿಎಫ್ 2 ಸಿನಿಮಾ ಕೂಡಾ 8.4 ರೇಟಿಂಗ್ ಪಾಯಿಂಟ್ ಪಡೆದಿತ್ತಷ್ಟೇ. ಆದರೆ ಕಾಂತಾರ ಅದನ್ನೂ ಮೀರಿಸಿದೆ.
-Edited by Rajesh Patil