Publish Date: Sat, 15 Oct 2022 (09:40 IST)
Updated Date: Sat, 15 Oct 2022 (09:54 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 9 ಸೀಸನ್ ನಲ್ಲಿ ದೀಪಿಕಾ ದಾಸ್ ಕಳೆದ ಸೀಸನ್ ನಲ್ಲಿ ಮಾಡಲಾಗದ ದಾಖಲೆಯನ್ನು ಈ ಸೀಸನ್ ನಲ್ಲಿ ಮಾಡಿದ್ದಾರೆ.
ದೀಪಿಕಾ ದಾಸ್ ಈ ವಾರ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಪ್ರವೀಣರಾಗಿ ಮನೆ ಪ್ರವೇಶಿಸಿದ ದೀಪಿಕಾ ಈಗ ಕ್ಯಾಪ್ಟನ್ ಆಗಿ ಹೊಸ ದಾಖಲೆ ಮಾಡಿದ್ದಾರೆ.
ಕಳೆದ ಬಾರಿ ಬಿಗ್ ಬಾಸ್ ನಲ್ಲಿ ದೀಪಿಕಾ ಒಟ್ಟು 16 ವಾರ ಮನೆಯಲ್ಲಿದ್ದರು. ಆದರೆ ಒಂದೇ ಒಂದು ಬಾರಿಯೂ ಕ್ಯಾಪ್ಟನ್ ಆಗಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮನೆ ಪ್ರವೇಶಿಸಿದಾಗಲೂ ದೀಪಿಕಾ ಆ ಒಂದು ಕೊರಗು ನನಗೆ ಈಗಲೂ ಇದೆ ಎಂದು ಹೇಳಿಕೊಂಡಿದ್ದರು. ಅಂತೂ ಈಗ ಆ ಕನಸು ನನಸಾಗಿದೆ.
-Edited by Rajesh Patil