Publish Date: Fri, 14 Oct 2022 (08:10 IST)
Updated Date: Fri, 14 Oct 2022 (08:48 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಜನಪ್ರಿಯ ಸ್ಪರ್ಧಿಯಾಗಿರುವ ರಾಕೇಶ್ ಅಡಿಗ ಮನೆಯ ಸದಸ್ಯರ ಮುಂದೆ ತಮ್ಮ ಹಳೇ ಲವ್ವರ್ ಬಗ್ಗೆ ಹೇಳಿಕೊಂಡಿದ್ದಾರೆ.
ಈ ಹಿಂದೊಮ್ಮೆ ರಾಕೇಶ್ ತಾನು ಈಗಲೂ ಹಳೆಯ ಗರ್ಲ್ ಫ್ರೆಂಡ್ಸ್ ಜೊತೆಗೂ ಈಗಲೂ ಚೆನ್ನಾಗಿದ್ದೇನೆ ಎಂದಿದ್ದರು. ಆದರೆ ಇದೀಗ ತಮ್ಮ ಹಳೇ ಲವ್ವರ್ ಮದುವೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ತಮ್ಮ ಎಕ್ಸ್ ಗರ್ಲ್ ಫ್ರೆಂಡ್ ಜೊತೆ ರಿಲೇಷನ್ ಶಿಪ್ ನಲ್ಲಿದ್ದೆ. ಆದರೆ ಈಗ ಮುರಿದುಬಿದ್ದಿದೆ. ಆಕೆಯೂ ಕಲಾವಿದೆ. ಹೊಸ ಪ್ರಾಜೆಕ್ಟ್ ಮಾಡಲು ಹೊರಟಿದ್ದಳು. ಆಕ್ಸಿಡೆಂಟ್ ಆಗಿ ಮುಖಕ್ಕೆ ಪೆಟ್ಟಾಗಿತ್ತು. ಈಗ ಕ್ಲಿಯರ್ ಆಗಿದೆ. ಇದೇ ವರ್ಷ ಕೊನೆಯಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದಾಳೆ. ಅವಳ ಮದುವೆಯಾಗುವ ಹುಡುಗನೂ ನನ್ನ ಫ್ರೆಂಡ್ ಎಂದು ರಾಕೇಶ್ ಹೇಳಿದ್ದಾರೆ. ಇಷ್ಟರಲ್ಲಿ ಅಲ್ಲಿದ್ದ ನೇಹಾ ಗೌಡ ಸೇರಿದಂತೆ ಇತರರಿಗೆ ಆಕೆ ಯಾರು ಎಂದು ಗೊತ್ತಾಯಿತು. ಆದರೆ ಇಲ್ಲಿ ಹೊರಗಿನವರ ಹೆಸರು ಬೇಡ ಎಂದು ಆಕೆಯ ಹೆಸರು ಹೇಳದೇ ಮಾತುಕತೆ ಮುಂದುವರಿಸಿದರು.
-Edited by Rajesh Patil