Select Your Language

Notifications

webdunia
webdunia
webdunia
webdunia

ನಟ ದರ್ಶನ್‌ ಗೆ ಉಮಾಪತಿ ಟಾಂಗ್‌!

ಉಮಾಪತಿ

geetha

bangalore , ಶುಕ್ರವಾರ, 23 ಫೆಬ್ರವರಿ 2024 (16:32 IST)
ಬೆಂಗಳೂರು :ನಟ ದರ್ಶನ್‌ ಅವಹೇಳನಕಾರಿ ಹೇಳಿಕೆ ನೀಡಿದ ಬಗ್ಗೆ  ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ ನೀಡಿದ್ದಾರೆ. ತಪ್ಪು ಯಾರೇ ಮಾಡಿದರೂ ಅದು ತಪ್ಪೇ ಎಂದಿರುವ ನಿರ್ಮಾಪಕ ಉಮಾಪತಿ, ನಾವೆಲ್ಲರೂ ಸಿನಿಮಾ ಮೂಲಕ ಸಂದೇಶ ಹರಡಬೇಕೇ ಹೊರತು ಈ ರೀತಿ ಅಲ್ಲಎಂದಿದ್ದಾರೆ. ಈ ವಿವಾದದಿಂದ ಸಮಾಜಕ್ಕೆ ಯಾವುದೇ ಸಂದೇಶ ನೀಡಲಾಗದು ಎಂದು ಉಮಾಪತಿ ಹೇಳಿದ್ದಾರೆ. 
 
ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ಇರಬೇಕು ಎಂದು ನಟ ದರ್ಶನ್‌ ಗೆ ಟಾಂಗ್‌ ನೀಡಿದ್ದಾರೆ.  ಜೊತೆಗೆ, ದೇಹದಲ್ಲಿ ತೂಕವಿದ್ದರೆ ಸಾಲದು. ಮಾತಿನಲ್ಲೂ ತೂಕವಿರಬೇಕು ಎಂದು ದರ್ಶನ್‌ ಸ್ಥೂಲದೇಹದ ಬಗ್ಗೆ ನಿರ್ಮಾಪಕ ಉಮಾಪತಿ ಲೇವಡಿ ಮಾಡಿದ್ದಾರೆ. ಕಾಟೇರ ಟೈಟಲ್‌ ವಿವಾದಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌, ನಿರ್ಮಾಪಕ ಉಮಾಪತಿ ವಿರುದ್ದ ನೀಡಿದ ಹೇಳಿಕೆ ಟೀಕೆಗೊಳಗಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿ ರಕ್ತದಲ್ಲಿ ಚಿತ್ರ ಬಿಡಿಸಿದ್ದಕ್ಕೆ ಮನವಿ ಮಾಡಿದ ಬಿಗ್ ಬಾಸ್ ವಿನಯ್ ಗೌಡ