Publish Date: Fri, 12 Nov 2021 (17:35 IST)
Updated Date: Fri, 12 Nov 2021 (17:36 IST)
ಹೈದರಾಬಾದ್: ರಾಜ್ಯ ರಸ್ತೆ ಸಾರಿಗೆ ಬಗ್ಗೆ ಜಾಹೀರಾತೊಂದರಲ್ಲಿ ವ್ಯಂಗ್ಯ ಮಾಡುವ ಡೈಲಾಗ್ ಹೊಡೆದ ನಟ ಅಲ್ಲು ಅರ್ಜುನ್ ಗೆ ತೆಲಂಗಾಣ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ, ದಿಶಾ ರೇಪ್ ಕೇಸ್ ಆರೋಪಿಗಳ ಎನ್ ಕೌಂಟರ್ ಮಾಡಿದ ಕನ್ನಡಿಗ ಅಧಿಕಾರಿ ಸಜ್ಜನರ್ ನೋಟಿಸ್ ನೀಡಿದ್ದಾರೆ.
ರ್ಯಾಪಿಡೋ ಎಂಬ ಬೈಕ್ ಸಾರಿಗೆ ಜಾಹೀರಾತೊಂದರಲ್ಲಿ ಅಲ್ಲು ಅರ್ಜುನ್ ರಾಜ್ಯ ರಸ್ತೆ ಸಾರಿಗೆಯನ್ನು ವ್ಯಂಗ್ಯ ಮಾಡಿದ್ದರು. ಈ ವಿಚಾರಕ್ಕೆ ಅಲ್ಲು ಅರ್ಜುನ್ ಮತ್ತು ರ್ಯಾಪಿಡೋ ಸಂಸ್ಥೆಗೆ ನೋಟಿಸ್ ನೀಡಲಾಗಿದೆ.
ಇನ್ನು, ಈ ವಿಚಾರ ವಿವಾದಕ್ಕೀಡಾಗುತ್ತಿದ್ದಂತೇ ರ್ಯಾಪಿಡೋ ಅಲ್ಲು ಅರ್ಜುನ್ ರ ಈ ಜಾಹೀರಾತಿಗೆ ಕತ್ತರಿ ಹಾಕಿದೆ.