Publish Date: Thu, 11 Nov 2021 (16:37 IST)
Updated Date: Thu, 11 Nov 2021 (16:38 IST)
ಬೆಂಗಳೂರು: ಮದಗಜ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ನಾಯಕಿ ನಟಿ ಆಶಿಕಾ ರಂಗನಾಥ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನೆಸಿಕೊಂಡು ಕಣ್ಣೀರು ಹಾಕಿದ್ದಾರೆ.
ಎಲ್ಲಾ ಸರಿ ಹೋಗಿದ್ದರೆ ಆಶಿಕಾ, ಪುನೀತ್ ಜೊತೆ ದ್ವಿತ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಅನಿರೀಕ್ಷಿತ ಘಟನೆ ಎಲ್ಲಾ ಕನಸುಗಳನ್ನು ಪುಡಿ ಪುಡಿ ಮಾಡಿದೆ ಎಂದು ಕಣ್ಣೀರು ಹಾಕಿದ್ದಾರೆ.
ಪುನೀತ್ ಸರ್ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ದ್ವಿತ ಸಿನಿಮಾದಲ್ಲಿ ನಟಿಸೋಕೆ ಎಲ್ಲಾ ಸಿದ್ಧತೆ ನಡೆದಿತ್ತು. ಆದರೆ ಪುನೀತ್ ಸರ್ ಜೊತೆ ನಟಿಸುವ ಕನಸು ಕನಸಾಗಿಯೇ ಉಳಿಯಿತು ಎಂದು ಆಶಿಕಾ ಕಣ್ಣೀರು ಹಾಕಿದ್ದಾರೆ.