Select Your Language

Notifications

webdunia
webdunia
webdunia
webdunia

ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ನವರಸನಾಯಕ ಜಗ್ಗೇಶ್ ಅಭಿನಯದ ತೋತಾಪುರಿ

ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ನವರಸನಾಯಕ ಜಗ್ಗೇಶ್ ಅಭಿನಯದ ತೋತಾಪುರಿ
ಬೆಂಗಳೂರು , ಗುರುವಾರ, 11 ನವೆಂಬರ್ 2021 (10:48 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ನಾಯಕರಾಗಿರುವ ಔಂಟ್ ಆಂಡ್ ಔಟ್ ಕಾಮಿಡಿ ಎಂಟರ್ ಟೈನರ್ ತೋತಾಪುರಿ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಲಿದೆ.

ಈ ಸಿನಿಮಾ ಮೂಲಕ ಮಠ ಖ್ಯಾತಿಯ ವಿಜಯ್ ಪ್ರಸಾದ್-ಜಗ್ಗೇಶ್ ಮತ್ತೆ ಒಂದಾಗಿದ್ದಾರೆ. ಪಕ್ಕಾ ಜಗ್ಗೇಶ್ ಶೈಲಿಯ ಎಂಟರ್ ಟೈನರ್ ಸಿನಿಮಾ ಇದಾಗಿದ್ದು, ಜಗ್ಗೇಶ್ ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ.

ಈ ಸಿನಿಮಾ ಏಕಕಾಲಕ್ಕೆ ಎರಡು ಭಾಗಗಳ ಚಿತ್ರೀಕರಣ ಮುಗಿಸಿದ್ದು ವಿಶೇಷ. ಇದು ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ತೆರೆ ಕಾಣುತ್ತಿರುವುದಾಗಿ ಚಿತ್ರತಂಡ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರಿಯಾಗ್ರಫರ್ ಆದ ನಟ ಅಜೇಯ್ ರಾವ್